ಪ್ರಶ್ನೆ: ಮದುವೆಯಾಗಿ ಮೂರುವರೆ ವರ್ಷಗಳಾಗಿವೆ. ನಾನು ಈಗ 28 ವರ್ಷದ ಯುವತಿ. ನಮ್ಮ ಮೊದಲ ರಾತ್ರಿಯಂದು ನನ್ನ ಗಂಡ ನನ್ನ ಸೇರಬೇಕೆನ್ನುವಷ್ಟರಲ್ಲಿ ಅವರಿಗೆ ಸ್ಖಲಿಸಿತ್ತು. ಆಮೇಲೆ ಕೂಡ ಅವರಿಗೆ ತುಂಬಾ ಹೊತ್ತು ಸರಸ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಖಲಿಸಿದ ನಂತರ ದೊಪ್ಪನೆ ಮಲಗ್ತಾರೆ.
ನಾನು ಪ್ರತಿದಿನವೂ ಮತ್ತೊಮ್ಮೆ ಸಂಭೋಗ ಮಾಡುವಂತೆ ಪೀಡಿಸಿದರೂ ಅವರಿಂದ ಅದು ಸಾಧ್ಯವಾಗುತ್ತಿಲ್ಲ. ನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆ. ಅಂದ್ಹಾಗೆ ಅವರ ಜನನಾಂಗ ಕೂಡ ಸಣ್ಣದಿದೆ. ಹೀಗಾಗಿ ನನಗೆ ಸುಖ ಸಿಗುತ್ತಿಲ್ಲ. ಮಕ್ಕಳೂ ಆಗುತ್ತಿಲ್ಲ ಏನು ಮಾಡಲಿ? ಪರಿಹಾರ ಸೂಚಿಸಿ.
ಸಲಹೆ: 28 ವರ್ಷದ ಯುವತಿ ನೀವಾಗಿದ್ದರೆ ನಿಮ್ಮ ಗಂಡನಿಗೆ 31 ವರ್ಷ ಇರಬೇಕು ಎಂದು ಭಾವಿಸುವೆ. ನಿಮ್ಮ ಗಂಡ ಸಂಭೋಗ ವಿಷಯದಲ್ಲಿ ಹೆದರಿದ್ದಾರೆಂದು ಅನಿಸುತ್ತದೆ. ನಿಮ್ಮ ಮೊದಲ ಮಿಲನದ ಸಮಯದಂದು ನಿಮ್ಮ ಗಂಡ ನಿಮ್ಮನ್ನು ಸೇರುವ ಮುನ್ನವೇ ಸ್ಖಲಿಸಿದ್ದಾರೆಂದರೆ ಅವರಿಗೆ ಶೀಘ್ರಸ್ಖಲನ ದೋಷವಿದೆ ಎಂದು ಹೇಳಲಾಗದು. ನಿಮ್ಮಿಬ್ಬರಿಗೂ ಅದು ಮೊದಲ ಅನುಭವವಾಗಿರುವುದರಿಂದ ಆತಂಕದಿಂದ ಶೀಘ್ರಸ್ಖಲನವಾಗಿದೆಯಷ್ಟೆ.
ಪುರುಷನಿಗೆ ಒಮ್ಮೆ ಸ್ಖಲಿಸಿದ ನಂತರ ಅದೇ ಸಮಯದಲ್ಲಿ ಮತ್ತೊಮ್ಮೆ ಸಂಭೋಗ ನಡೆಸಲು ಸಾಧ್ಯವಿಲ್ಲ. ಆತ ಮತ್ತೊಮ್ಮೆ ಸಂಭೋಗ ಮಾಡಬೇಕಾದರೆ ಒಂದರಿಂದ ಎರಡು ಗಂಟೆಯವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಸ್ಖಲಿಸಿದ ತಕ್ಷಣ ಮತ್ತೊಮ್ಮ ಅದನ್ನು ನಡೆಸುವಂತೆ ಒತ್ತಾಯಿಸುವುದು ಸರಿಯಲ್ಲ.
ಗುಪ್ತಾಂಗ ಎಷ್ಟೇ ಗಾತ್ರದಲ್ಲಿದ್ದರೂ ಅದು ಯೋನಿಗೆ ತಕ್ಕಂತೆ ಹೊಂದಿಕೊಳ್ಳುವುದರಿಂದ ಗುಪ್ತಾಂಗದ ಗಾತ್ರಕ್ಕೂ, ಸಂಭೋಗಕ್ಕೂ ಯಾವುದೇ ಸಂಬಂಧವಿಲ್ಲ.
ಸಾವಕಾಶದಿಂದ, ಯಾವುದೇ ಆತಂಕವಿಲ್ಲದೆ ಸರಸ ಮಾಡಿದರೆ ಅಥವಾ ಪುರುಷ ಸ್ಖಲಿಸುವ ಸಂದರ್ಭ ಸಂಭೋಗ ಹೊರತಾದ ಯೋಚನೆ ಮಾಡುವ ಮೂಲಕ ಸ್ಖಲನದಿಂದ ತಪ್ಪಿಸಬಹುದು. ಸ್ಖಲನವಾಗುವ ಸಂದರ್ಭ ಜನನಾಂಗದಿಂದ ಶಿಶ್ನವನ್ನು ಹೊರತೆಗೆದು ಸ್ವಲ್ಪ ಸಮಯ ಸಂಭೋಗ ನಿಲ್ಲಿಸಿ ಮತ್ತೊಮ್ಮೆ ಅದನ್ನು ಮಾಡುವ ಮೂಲಕ ಬಾಧೆಯಿಂದ ಹೊರಬರಬಹುದು.
ಶೀಘ್ರ ಸ್ಖಲನದಿಂದ ಮುಕ್ತರಾಗಲು ವಯಾಗ್ರದಂಥಾ ಮಾತ್ರೆಗಳಿವೆ. ಅಲ್ಲದೆ ಗುಪ್ತಾಂಗಕ್ಕೆಂದೇ ಸಿಂಪಡಿಸುವ ಸ್ಪ್ರೇಗಳಿವೆ. ಇದನ್ನು ಲೈಂಗಿಕ ತಜ್ಞರ ಸಲಹೆ ಸೂಚನೆಗಳಿಗನುಸಾರ ಉಪಯೋಗಿಸಬಹುದು.