Publish Date: Tue, 14 Jan 2020 (15:40 IST)
Updated Date: Tue, 14 Jan 2020 (15:42 IST)
ಪ್ರಶ್ನೆ: ನಾನು 25 ವರ್ಷದ ಯುವಕನಾಗಿದ್ದೇನೆ. ನನ್ನ ಗೆಳೆಯರು ನನ್ನನ್ನು ಸಲಿಂಗ ಕಾಮಿ ಎಂದು ಹೇಳುತ್ತಾರೆ. ನನ್ನ ಗೆಳೆಯರು ಯುವತಿಯರ ಜೊತೆ ಸಂಬಂಧವನ್ನು ಹೊಂದಲು ಬಯಸುತ್ತಾರೆ.
ಆದರೆ ನನಗೆ ಅದರಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ಹಾಗಾದ್ರೆ ನನ್ನಲ್ಲಿ ಸಮಸ್ಯೆ ಇದೆಯಾ?
ಸಲಹೆ: ಮೊದಲು ನೀವು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತಹ, ಅದಕ್ಕೆ ಪರಿಹಾರವನ್ನು ಸೂಚಿಸುವಂತಹ ಒಬ್ಬ ಒಳ್ಳೆಯ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಬೇಕು.
ನಿಮ್ಮ ಸ್ನೇಹಿತರು ನಿಮ್ಮ ಲೈಂಗಿಕತೆಯ ಬಗ್ಗೆ ನಿರ್ಧರಿಸಬಾರದು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಮನೋವೈದ್ಯರನ್ನು ನೀವು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.