Publish Date: Sat, 28 Dec 2019 (20:32 IST)
Updated Date: Sat, 28 Dec 2019 (20:34 IST)
ಪ್ರಶ್ನೆ: ಸರ್, ವಯಸ್ಸಲ್ಲದ ವಯಸ್ಸಲ್ಲಿ ಲವ್ ನಲ್ಲಿ ಬಿದ್ದು ಹಾಳಾಗಿದ್ದೆ. ಈಗ ಮದುವೆಯಾದವನೂ ಸಹ ನನ್ ಜೊತೆ ಸರಿಯಾಗಿಲ್ಲ. ಆತನೂ ಬೇರೆ ಹುಡುಗಿಯರಿಬ್ಬರ ಜೊತೆ ಸಂಬಂಧ ಹೊಂದಿದ್ದಾನೆ. ಮುಂದೇನು ಮಾಡಲಿ?
ಸಲಹೆ: ನಿಮ್ಮ ಪ್ರೀತಿ ನಿಜವೇ ಆಗಿದ್ದಲ್ಲಿ ನೀವು ಧೈರ್ಯ ತೋರಿ ಮೊದಲೇ ಪ್ರೀತಿಸಿದವನನ್ನೇ ಮದುವೆ ಆಗಬಹುದಿತ್ತು. ಪ್ರೀತಿಸಿದವನಿಗೆ ಮನಸ್ಸು ಕೊಟ್ಟರೂ ಪರವಾಗಿಲ್ಲ ಮೈ ಕೊಡಬಾರದಿತ್ತು. ಅದಿರಲಿ, ನಿಮ್ಮ ಗಂಡನಿಗೆ ನಿಮ್ಮ ಪ್ರಿಯಕರ ವಿಷಯ ತಿಳಿದಿದೆಯಾ ಇಲ್ಲವಾ ಎನ್ನುವುದು ಗೊತ್ತಿಲ್ಲ.
ಒಂದು ವೇಳೆ ಗೊತ್ತೇ ಆಗಿದ್ದಲ್ಲಿ ಇನ್ನೊಮ್ಮೆ ಆ ತಪ್ಪು ಮಾಡೋದಿಲ್ಲ ಅಂತ ಹೇಳಿ. ಅವರ ಸಂಬಂಧದ ಬಗ್ಗೆಯೂ ಕೇಳಿ ನೋಡಿ, ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಿ.