Publish Date: Sat, 28 Dec 2019 (15:50 IST)
Updated Date: Sat, 28 Dec 2019 (15:52 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಏಳು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣವಾಗಿ ಹಾಸಿಗೆ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ದಿನಗಳು ಅವರು ಸರಿಯಾಗಿದ್ದರು.
ಆ ಬಳಿಕ ಆಫೀಸ್ ನಲ್ಲಿರೋ ಹುಡುಗಿಯರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಹತ್ತು ಹನ್ನೆರಡು ದಿನಗಳಾದರೂ ನನ್ನ ಜೊತೆ ಮಲಗಿ ಸುಖಿಸೋದಿಲ್ಲ. ಮುಂದೇನು ಮಾಡಲಿ?
ಉತ್ತರ: ನೀವು ಗಂಡನಿಗೆ ಏನು ಬೇಕು, ಏನು ಬೇಡ ಅನ್ನೋದನ್ನು ಅರ್ಥಮಾಡಿಕೊಳ್ಳಿ. ಅರ್ಥವಾಗದಿದ್ದರೆ ಅವರ ಜೊತೆಗೆ ಕುಳಿತು ಮಾತನಾಡಿ.
ಸಮಸ್ಯೆಗಳಿದ್ದರೆ ಚರ್ಚೆ ಮಾಡಿ ಸರಿಪಡಿಸಿಕೊಳ್ಳಿ. ಆಗ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಬಲ್ಲರು. ಇದು ಆಗದಿದ್ದರೆ ಮನೋವೈದ್ಯರ ಬಳಿ ನಿಮ್ಮ ಗಂಡನನ್ನು ಕರೆದುಕೊಂಡು ಹೋಗಿ ಸಲಹೆ ಪಡೆದುಕೊಳ್ಳಿ.