Publish Date: Sun, 22 Dec 2019 (16:33 IST)
Updated Date: Sun, 22 Dec 2019 (16:35 IST)
ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಒಂದೆರಡು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿದ್ದಾಳೆ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ.
ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಅವಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದಾನೆ. ಅವರಿಬ್ಬರೂ ಬೆಡ್ ಮೇಲೆ ಒಂದಾಗಿರುವುದನ್ನು ನಾನು ದಿನವೂ ಕಿಟಕಿಯಲ್ಲಿ ನೋಡುತ್ತಿರುವೆ. ಗಂಡನಿಲ್ಲದ ಸಮಯದಲ್ಲಿ ಅವಳು ತನ್ನ ಇನಿಯನನ್ನು ಮನೆಗೆ ಕರೆದುಕೊಂಡು ಬಂದು ಸುಖ ಅನುಭವಿಸುತ್ತಿದ್ದಾಳೆ. ಏನೂ ತಿಳಿಯದ ಆಕೆಯ ಗಂಡನಿಗೆ ಈ ವಿಷಯ ಹೇಳಲೇ?
ಉತ್ತರ: ನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವರ ಜೀವನಕ್ಕೆ ಏನು ಬೇಕೋ ಅದನ್ನು ಪಡೆದುಕೊಳ್ತಿದ್ದಾರೆ. ಅದು ಅವರ ಮನೆ ವಿಷಯ. ಅವರ ಗಂಡ ನಿಮ್ಮ ಸ್ನೇಹಿತನೇ, ನಿಮ್ಮ ಬಂಧುವೇ ಎಂಬುದು ಸ್ಪಷ್ಟಪಡಿಸಿಲ್ಲ.
ಆದರೂ ನೀವು ಒಂದು ವೇಳೆ ಆಕೆಯ ಗಂಡನಿಗೆ ಅವಳ ಅಕ್ರಮ ಸಂಬಂಧದ ಬಗ್ಗೆ ಹೇಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗೋದಿಲ್ಲ ಎಂದುಕೊಂಡಿರುವಂತೆ, ಅವಳ ಅಸಲಿ ಬಣ್ಣ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಅದನ್ನು ನಿವಾಗಿಯೇ ಹೇಳಿ ನೀವು ಕೆಟ್ಟವರಾಗಿ ಮತ್ತು ವಿಷಮ ಪರಿಸ್ಥಿತಿ ಎದುರಿಸೋದು ತರವಲ್ಲ.