Publish Date: Sun, 22 Dec 2019 (16:27 IST)
Updated Date: Sun, 22 Dec 2019 (16:28 IST)
ಪ್ರಶ್ನೆ: ನಾನು ಮದುವೆಯಾಗಿ ಒಂದು ವರ್ಷವಾಗಿದೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತೇನೆ. ಅನ್ಯೋನ್ಯ ಹಾಗೂ ಆದರ್ಶ ದಂಪತಿಗಳು ನಾವಾಗಬೇಕು ಅಂತೆಲ್ಲ ಕನಸು ಕಂಡಿರುವೆ.
ಆದರೆ ನನ್ನ ಪತ್ನಿ ದಿನ ರಾತ್ರಿ ಆದರೆ ಸಾಕು, ಹಾಸಿಗೆ ಮೇಲೆ ನಾವು ಒಂದಾಗಬೇಕೆಂದರೆ ಗುಪ್ತಾಂಗ ನೋವು, ಸೊಂಟ ನೋವಾಗ್ತಿದೆ ಎನ್ನುತ್ತಾಳೆ. ಇದರಿಂದ ನನಗೆ ರಾತ್ರಿ ಕಹಿ ಅನುಭವ ಆಗುತ್ತಿದೆ. ಪರಿಹಾರ ತಿಳಿಸಿ.
ಉತ್ತರ: ನೀವು ನಿಮ್ಮ ಪತ್ನಿಯನ್ನು ಪ್ರೀತಿಸುತ್ತಿರುವುದು ಹಾಗೂ ಆದರ್ಶ ದಂಪತಿಯಾಗಬೇಕೆಂದಿರುವ ನಿಮಗೆ ನನ್ನ ಅಭಿನಂದನೆಗಳು. ದಂಪತಿಗಳಲ್ಲಿ ಪ್ರೀತಿ, ಒಲವು, ಆತ್ಮೀಯತೆ, ನೋವು,ನಲಿವು ಹಂಚಿಕೊಳ್ಳುವುದು ಪ್ರೇಮ ಹಾಗೂ ಕಾಮದಾಟ ಸಹಜವಾಗಿರುತ್ತದೆ. ರಾತ್ರಿಯಾದರೆ ಸೊಂಟ ನೋವು ಎನ್ನುವ ನಿಮ್ಮ ಪತ್ನಿಗೆ ಮೊದಲು ಉತ್ತರ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಮಹಿಳೆಯರಲ್ಲಿ ಸೊಂಟದ ಭಾಗ ಹಾಗೂ ನಿತಂಬದ ಮೇಲಿನ ಭಾಗದಲ್ಲಿ ಸಹಜವಾಗಿ ನೋವಿರುತ್ತದೆ.
ವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸಿ. ಅಂದ್ಹಾಗೆ ಹಾಸಿಗೆ ಮೇಲಿನ ಆಟವೇ ಜೀವನವಲ್ಲ. ಅದು ಜೀವನದ ಒಂದು ಭಾಗ ಮಾತ್ರ ಎಂದು ತಿಳಿದುಕೊಳ್ಳಿ. ಇದರಿಂದ ನೀವಂದುಕೊಂಡು ಸುಮಧುರ ಜೀವನ ನಿಮ್ಮದಾಗುತ್ತದೆ.