Publish Date: Fri, 20 Dec 2019 (16:39 IST)
Updated Date: Fri, 20 Dec 2019 (16:40 IST)
ಪ್ರಶ್ನೆ: ನನಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದೆ. ಇದೀಗ 15 ವರ್ಷಗಳು ಕಳೆದರೂ ನನಗೆ ನನ್ನ ಗಂಡನಿಂದ ಸಂಪೂರ್ಣ ಲೈಂಗಿಕ ಸುಖ ಸಿಕ್ಕೇ ಇಲ್ಲ. ಮಕ್ಕಳೂ ಆಗಿಲ್ಲ. ನಾನು ಬಹುದೊಡ್ಡ ಉದ್ದಿಮೆಯನ್ನು ಹೊಂದಿರುವೆ.
ಆದರೆ ನನ್ನ ಗಂಡ ನನ್ನ ಜೀವನವನ್ನು ಹಾಳು ಮಾಡುತ್ತಿದ್ದಾನೆ. ಸುಖದಿಂದ ವಂಚಿತಳಾಗುವಂತೆ ಮಾಡುತ್ತಿದ್ದಾನೆ. ಹೀಗಾಗಿ ಸಂಸ್ಥೆಯ ಮ್ಯಾನೇಜರ್ ನಿಂದ ನಾನು ಮಗು ಪಡೆಯೋದಕ್ಕಾಗಿ ಆತನೊಂದಿಗೆ ಮಲಗುತ್ತಿರುವೆ. ಇದು ತಪ್ಪೇ?
ಉತ್ತರ : ನಿಮ್ಮ ಸಂಬಂಧದಲ್ಲಿ ಈ ರೀತಿ ಆಗಿರುವುದು ತುಂಬಾ ಬೇಸರದ ಸಂಗತಿ. ಇದಕ್ಕೆ ಇರುವ ದಾರಿ ಒಂದೇ. ಅವರು ಲೈಂಗಿಕ ತಜ್ಞರ ಹತ್ತಿರ ಭೇಟಿ ನೀಡುವಂತೆ ಮಾಡಿ. ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಅಸಕ್ತಿ ಬರುವಂತೆ ಔಷಧಗಳನ್ನು ತೆಗೆದುಕೊಳ್ಳಬೇಕು.
ಅವರಲ್ಲಿ ಲೈಂಗಿಕ ಭಾವನೆ ಮೂಡುವಂತೆ ನೀವು ಯಾಕೆ ಪ್ರೇರಣೆ ನೀಡಬಾರದು. ನೀವು ಅನೈತಿಕ ದಾರಿಗೆ ಹೋಗುತ್ತಿರೋದನ್ನು ಕೈ ಬಿಡಿ. ನಿಮ್ಮ ಗಂಡನಿಂದಲೇ ಮಗು ಪಡೆಯೋ ಪ್ರಯತ್ನ ಮಾಡಿ.