Publish Date: Tue, 24 Mar 2020 (10:47 IST)
Updated Date: Tue, 24 Mar 2020 (10:49 IST)
ಬೆಂಗಳೂರು:ನಾನು 28 ವರ್ಷದ ಯುವಕ. ನನ್ನ ಸಮಸ್ಯೆ ಏನೆಂದರೆ ನಾನೊಂದು ಹುಡುಗಿಯನ್ನು ಇಷ್ಟಪಡುತ್ತಿದ್ದೇನೆ. ನಾವಿಬ್ಬರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದೇವೆ. ಆದರೆ ಅವಳ ಮನೆಯವರು ನಮ್ಮ ಮದುವೆಗೆ ಒಪ್ಪಿಗೆ ನೀಡುತ್ತಿಲ್ಲ. ಅವಳು ನನಗಿಂತ ಉತ್ತಮ ಕೆಲಸದಲ್ಲಿ ಇದ್ದಾಳೆ. ಗೆಳತಿ ಮನೆಯವರನ್ನು ಒಪ್ಪಿಸುವಂತೆ ದುಂಬಾಲು ಬಿದ್ದಿದ್ದಾಳೆ ಏನು ಮಾಡಲಿ?
ತಂದೆ-ತಾಯಿಗಳಿರುವ ಆತಂಕ ಸಹಜವಾದದ್ದು. ಹೆಚ್ಚಿನವರು ತಮ್ಮ ಮಕ್ಕಳ ಸುಖವನ್ನೇ ಬಯಸುತ್ತಾರೆ. ಆದರೂ ನೀವು ನಿಮ್ಮ ಪ್ರಯ್ನವನ್ನು ಮುಂದುವರಿಸಿ. ಇದರಿಂದ ಅವರು ನಿಮ್ಮನ್ನು ಒಪ್ಪಬಹುದು. ಹಾಗೇ ನಿಮ್ಮ ಹುಡುಗಿಯ ಬಳಿ ಕೂಡ ಈ ಕುರಿತು ಚರ್ಚಿಸಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಿ.