Publish Date: Wed, 05 Feb 2020 (08:55 IST)
Updated Date: Wed, 05 Feb 2020 (08:57 IST)
ಬೆಂಗಳೂರು: ಇತ್ತೀಚೆಗೆ ನನಗೆ ವಿಚಿತ್ರ ಭಯ ಶುರುವಾಗಿದೆ. ಗಂಡ ಮನೆಗೆ ಬರಲು ಕೊಂಚ ತಡವಾದರೂ ಅವನಿಗೇನಾದರೂ ಆಯಿತು, ಅವನು ನನ್ನ ಬಿಟ್ಟು ಹೋದನೇನೋ ಎಂದು ಆತಂಕವಾಗುತ್ತದೆ. ಸಾವು, ನೋವಿನ ಸುದ್ದಿ ಕೇಳಿದರೆ ವಿಚಿತ್ರ ಭಯವಾಗುತ್ತದೆ. ಏನು ಮಾಡಲಿ?
ನೀವು ಒಂದು ರೀತಿಯ ಮಾನಸಿಕ ಖಿನ್ನತೆ, ಆತಂಕದಿಂದ ಬಳಲುತ್ತಿದ್ದೀರಿ ಎಂದರ್ಥ. ಮಾನಸಿಕ ತಜ್ಞರನ್ನು ಭೇಟಿಯಾಗಿ ಇದಕ್ಕೆ ವೈದ್ಯಕೀಯ ಪರಿಹಾರ ಕಂಡುಕೊಳ್ಳಿ. ಜತೆಗೆ ದೇವರ ಧ್ಯಾನ, ಉತ್ತಮ ಪುಸ್ತಕ, ಸಂಗೀತ ಕೇಳಿ ಮಾನಸಿಕ ಉದ್ವೇಗವನ್ನು ಹತೋಟಿಗೆ ತರಲು ಪ್ರಯತ್ನಿಸಿ. ಸಾಧ್ಯವಾದರೆ ಗಂಡನ ಜತೆ ನಿಮಗಿಷ್ಟವಾದ ಸ್ಥಳಕ್ಕೆ ಪ್ರವಾಸ ಹೋಗಿ ಮನಸ್ಸು ಹಗುರ ಮಾಡಿಕೊಳ್ಳಿ.