Publish Date: Wed, 05 Feb 2020 (08:53 IST)
Updated Date: Wed, 05 Feb 2020 (08:55 IST)
ಬೆಂಗಳೂರು: ನನಗೆ 40 ವರ್ಷ. ನನ್ನ ಗಂಡ ತೀರಿಕೊಂಡು ಎರಡು ವರ್ಷವಾಗಿದೆ. ಇತ್ತೀಚೆಗೆ ನನಗಿಂದ ಐದು ವರ್ಷ ಕಿರಿಯ ವಯಸ್ಸಿನ ಯುವಕನ ಜತೆ ಸಂಬಂಧವೇರ್ಪಟ್ಟಿದೆ. ಆತ ನನ್ನನ್ನು ಮದುವೆಯಾಗಲೂ ಒಪ್ಪಿದ್ದಾನೆ. ಆದರೆ ನನ್ನ ಕುಟುಂಬದವರು ನನ್ನ ಈ ಸಂಬಂಧಕ್ಕೆ ಕೀಳಾಗಿ ಮಾತನಾಡುತ್ತಾರೆ. ನಿಮ್ಮ ಸಲಹೆಯೇನು?
ಸಂಬಂಧ ಕೇವಲ ದೈಹಿಕ ವಾಂಛೆ ತೀರಿಸಿಕೊಳ್ಳಲು ಮಾತ್ರ ಎಂದಾಗಬಾರದು. ಒಂದು ವೇಳೆ ನಿಮ್ಮಿಬ್ಬರ ನಡುವೆ ಪರಸ್ಪರ ನಂಬಿಕೆ, ಒಬ್ಬರಿಗೊಬ್ಬರು ಆಸರೆಯಾಗುವ ವಿಶ್ವಾಸವಿದ್ದರೆ ಹಿರಿಯರ ಮನ ಒಲಿಸಿ ಮದುವೆಯಾಗಿ ಸುಖ ಜೀವನ ನಡೆಸಬಹುದು. ಗಂಡ ತೀರಿಕೊಂಡ ಮಾತ್ರಕ್ಕೆ ಜೀವನವಿಡೀ ಒಂಟಿಯಾಗಿ ಕಳೆದುಕೊಳ್ಳಬೇಕೆಂದಿಲ್ಲ. ನಿಮ್ಮ ಭವಿಷ್ಯಕ್ಕಾಗಿ ಒಬ್ಬರ ಆಸರೆ ಅಗತ್ಯವಿದೆ. ಅದನ್ನು ಈ ಯುವಕ ನೀಡುತ್ತಾನೆಂದಾದರೆ ಆ ಸಂಬಂಧ ಮುಂದುವರಿಸುವುದರಲ್ಲಿ ತಪ್ಪಿಲ್ಲ.