Publish Date: Tue, 04 Feb 2020 (09:10 IST)
Updated Date: Tue, 04 Feb 2020 (09:12 IST)
ಬೆಂಗಳೂರು: ನನಗೆ ನಿಮಿರು ದೌರ್ಬಲ್ಯ ಸಮಸ್ಯೆಯಿದೆ. ಇದರಿಂದಾಗಿ ಇತ್ತೀಚೆಗೆ ಪತ್ನಿ ಜತೆ ಲೈಂಗಿಕ ಕ್ರಿಯೆಗೆ ಆಸಕ್ತಿಯೇ ಬರುತ್ತಿಲ್ಲ. ಹೀಗಾಗಿ ವಯಾಗ್ರ ಗುಳಿಗೆ ಸೇವಿಸಲು ಪ್ರಾರಂಭಿಸಿರುವೆ. ಇದರಿಂದಲೂ ಕೆಲಸವಾಗುತ್ತಿಲ್ಲ. ಏನು ಮಾಡಲಿ?
ಸುಮ್ಮನೇ ವಯಾಗ್ರ ಗುಳಿಗೆ ನುಂಗುತ್ತಿದ್ದರೆ ಕೆಲಸವಾಗದು. ಮೊದಲಿಗೆ ನಿಮ್ಮ ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ಬಳಿಕ ಲೈಂಗಿಕ ನಿರಾಸಕ್ತಿಗೆ ನಿಜವಾದ ಕಾರಣವೇನೆಂದು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಿ. ಜಾಹೀರಾತುಗಳಲ್ಲಿ ಬರುವ ಔಷಧಗಳನ್ನು ಪ್ರಯೋಗ ಮಾಡುವ ಬದಲು ಲೈಂಗಿಕ ತಜ್ಞರನ್ನು ಭೇಟಿಯಾಗಿ.