Publish Date: Thu, 12 Dec 2019 (08:45 IST)
Updated Date: Thu, 12 Dec 2019 (08:46 IST)
ಬೆಂಗಳೂರು: ನನ್ನ ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ಹಾಸಿಗೆ ಸುಖದ ವಿಚಾರದಲ್ಲಿ ಯಾಕೋ ನನ್ನ ಹೆಂಡತಿಗೆ ಬೇಕಾದಂತೆ ಸುಖ ಕೊಡಲು ಆಗುತ್ತಿಲ್ಲ. ಆಕೆಯನ್ನು ಪರಾಕಾಷ್ಠೆಗೆ ಏರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ನನ್ನ ಚಿಂತೆ. ಇದಕ್ಕೇನು ಮಾಡುವುದು?
ಸಾಕಷ್ಟು ಮುನ್ನಲಿವಿನ ಚಟುವಟಿಕೆಯಲ್ಲಿ ತೊಡಗಿದರೂ ನಿಮಗೆ ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆಕೆಯ ನಿರೀಕ್ಷೆಯೇನೆಂದು ತಿಳಿದುಕೊಳ್ಳುವುದು ಉತ್ತಮ. ಸಾಧ್ಯವಾದರೆ ಒಬ್ಬ ಲೈಂಗಿಕ ತಜ್ಞರನ್ನು ಭೇಟಿಯಾಗಿ ಇದರ ಬಗ್ಗೆ ಇಬ್ಬರೂ ಸಮಾಲೋಚನೆ ನಡೆಸಿ. ಸಾಮಾನ್ಯವಾಗಿ ಮಹಿಳೆಯರು ಬೇಗನೇ ಲೈಂಗಿಕ ಉದ್ರೇಕವಾಗಲ್ಲ. ಅವರ ಇಷ್ಟಕಷ್ಟಗಳನ್ನು ಅರಿತು ನಡೆದುಕೊಳ್ಳುವುದು ಮುಖ್ಯ.