ಕೆಮ್ಮು ಬಂದಾಗ ಅದನ್ನು ತಡೆಯೋಕೆ ಹೋಗಬಾರದು. ಮುಖಕ್ಕೆ ಬಟ್ಟೆ ಅಡ್ಡ ಹಿಡಿದು ಯಾರಿಗೂ ತೊಂದರೆಯಾಗದಂತೆ ಕೆಮ್ಮಿ ಬಿಡಬೇಕು.
ಕೆಮ್ಮು ಬಂದಿದ್ದರೂ ಒತ್ತಾಯ ಪೂರ್ವಕವಾಗಿ ಅದನ್ನು ತಡೆದರೆ ಅದರ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ.
ನಿರಂತರವಾಗಿ ಕೆಮ್ಮು ತಡೆಹಿಡಿದುಕೊಳ್ಳುವುದರಿಂದಾಗಿ ಮುಂದೆ ಅದು ಕ್ಷಯ ರೋಗಕ್ಕೆ ದಾರಿಯಾಗಬಲ್ಲದು. ಕೆಲವೊಂದು ಸಲ ಪುಪ್ಪಸಿನ ತೊಂದರೆಗೆ ಕಾರಣವಾಗಬಹುದು.
ಕೊರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೆಮ್ಮು ಬಂದರೆ ತಡಮಾಡದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.