ಈಗ ಬೇಸಿಗೆ ಕಾಲ. ಮಾವಿನಕಾಯಿ ಮಾರುಕಟ್ಟೆಯಲ್ಲಿ ಸಾಕಷ್ಟು ಬಂದಿವೆ. ಇನ್ನೇಕೆ ತಡ, ಮಾವಿನಕಾಯಿ ಹಪ್ಪಳ ಮಾಡಿನೋಡಿ.
ಏನೇನ್ ಬೇಕು?
ಅಕ್ಕಿ ಮುಕ್ಕಾಲು ಕಿಲೋ
ಹುಳಿ ಮಾವಿನ ಕಾಯಿ 6
ಇಂಗು
ಉಪ್ಪು
ಹಸಿಮೆಣಸಿನಕಾಯಿ 15
ಮಾಡೋದು ಹೇಗೆ? : ಅಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಆ ಮೇಲೆ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ತುರಿದ ಮಾವಿನಕಾಯಿ, ಸಣ್ಣಗೆ ಮಾಡಿದ ಹಸಿಮೆಣಸಿನಕಾಯಿ, ಉಪ್ಪು, ಇಂಗು ಹಾಕಿ ಕಲಿಸಿ ನಾದಬೇಕು.
ಹಿಟ್ಟನ್ನು ಹದ ಮಾಡಿಕೊಂಡು ಸಣ್ಣ ಉಂಡೆ ಮಾಡಿ ಲಟ್ಟಿಸಬೇಕು. ಬಿಸಿಲಿನಲ್ಲಿ ಒಣಗಿಸಿ, ಎಣ್ಣೆಯಲ್ಲಿ ಕರಿದರೆ ಹಪ್ಪಳ ರೆಡಿ.