Publish Date: Sun, 31 May 2020 (14:15 IST)
Updated Date: Sun, 31 May 2020 (14:40 IST)
ಕೊರೊನಾ ನಿಯಂತ್ರಣದ ಹೋರಾಟ ಬಲವಾಗುತ್ತಲೇ ಸಾಗಬೇಕು. ಯಾವುದೇ ಕಾರಣಕ್ಕೂ ಹೋರಾಟ ದುರ್ಬಲವಾಗಬಾರದು ಎಂದು ದೇಶವಾಸಿಗಳಿಗೆ ಕರೆ ನೀಡಿರುವ ಪ್ರಧಾನಿ, ಸ್ವಾವಲಂಬಿ ಭಾರತದ ಕನಸು ಬಿತ್ತಿದ್ದಾರೆ.
ವೋಕಲ್ ಫಾರ್ ಲೋಕಲ್ ಎಂದು ಕೆಲವರು ಅಭಿಯಾನ ಶುರು ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಆಗಬೇಕು. ಒಂದಷ್ಟು ಜನರು ತಮ್ಮ ಸುತ್ತಮುತ್ತಲಿನಲ್ಲೇ ಸಿದ್ಧಗೊಳ್ಳುವ ವಸ್ತುಗಳ ಪಟ್ಟಿ ತಯಾರಿಸಿದ್ದು, ಸ್ಥಳೀಯವಾಗಿಯೇ ಸಿಗುವ ವಸ್ತು, ಉತ್ಪನ್ನಗಳನ್ನು ಬಳಸಲಾರಂಭಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವದೇಶಿ ವಸ್ತಗಳನ್ನೇ ಬಳಸಲು ಪ್ರೋತ್ಸಾಹ ನೀಡಿ ಎಂದಿರುವ ಮೋದಿ, ಯೋಗ ಹಾಗೂ ಆಯುರ್ವೇದ ಪದ್ಧತಿ ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎಂದಿದ್ದಾರೆ.
ಯೋಗದ ಜೊತೆ ಜೊತೆಗೆ ಆಯುರ್ವೇದ ಪದ್ಧತಿಯನ್ನು ಜನರು ರೂಢಿಸಿಕೊಳ್ಳಬೇಕು. ಕೊರೊನಾ ವಿರುದ್ಧದ ಹೋರಾಟ ಯಶಸ್ವಿಯಾಗಿ ಸಾಗುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದೇ ಕಾರಣ ಎಂದಿದ್ದಾರೆ.