Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೋಗನಿರೋಧಕ ಶಕ್ತಿ ಹೆಚ್ಚಾಗಲು ಈ ಮನೆಮದ್ದನ್ನು ಸೇವಿಸಿ

ರೋಗನಿರೋಧಕ ಶಕ್ತಿ ಹೆಚ್ಚಾಗಲು ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಬುಧವಾರ, 12 ಆಗಸ್ಟ್ 2020 (09:09 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದೆ. ಈ ಕೊರೊನಾ ಹೆಮ್ಮಾರಿಯ ವಿರುದ್ಧ ಹೋರಾಡಲು ನಮಗೆ ರೋಗನಿರೋಧಕ ಶಕ್ತಿ ಅಧಿಕವಾಗಿರಬೇಕು. ಅದಕ್ಕಾಗಿ ಈ ಮನೆಮದ್ದನ್ನು ಸೇವಿಸಿ.

ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ ಅದನ್ನು ಜರಡಿಯಲ್ಲಿ ಹಾಕಿ ತಿಕ್ಕಬೇಕು. ಆಗ ಬೀಜ ಹಾಗೂ ನೆಲ್ಲಿಯ ತಿರುಳು ಬೇರೆ ಬೇರೆಯಾಗುತ್ತದೆ. ನೆಲ್ಲಿಯ ತಿರುಳನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನೆಲ್ಲಿಕಾಯಿ ಬೇಯಿಸಿದ ನೀರಿಗೆ ಜೋನಿ ಬೆಲ್ಲ ಹಾಕಿ ಪಾಕ ತಯಾರಿಸಬೇಕು. ಈ ಪಾಕಕ್ಕೆ ತುಪ್ಪದಲ್ಲಿ ಹುರಿದ ಪೇಸ್ಟ್ ನ್ನು ಹಾಕಿ ಅದಕ್ಕೆ ಹಿಪ್ಪಲಿ, ದಾಲ್ಚಿನ್ನಿ, ಏಲಕ್ಕಿ, ನಾಗ ಕೇಸರ ಎಲ್ಲದರ ಪುಡಿಯನ್ನು ಹಾಕಿ ಒಲೆಯಲ್ಲಿ ಇಳಿಸಿಟ್ಟುಕೊಳ್ಳಬೇಕು. ತಣ್ಣಗಾದ ಬಳಿಕ  ತುಪ್ಪದ  ಅರ್ಧದಷ್ಟು ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರಾಹೀನತೆ ಸಮಸ್ಯೆಯನ್ನು ದೂರಮಾಡಲು ಈ ಎಲೆಯ ನೀರನ್ನು ಸೇವಿಸಿ