ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಮಧುಮೇಹಿಗಳಿಗೆ ಚಕ್ಕೆ ಎಷ್ಟು ಉಪಯುಕ್ತ ವಸ್ತು ಗೊತ್ತಾ?
ಚಕ್ಕೆಯಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಹಲವು ಮಾನಸಿಕ ದೈಹಿಕ ಸಮಸ್ಯೆಗಳನ್ನು ದೂರ ಮಾಡುವ ಗುಣ ಹೊಂದಿದೆ. ಪ್ರತಿನಿತ್ಯ ಚಕ್ಕೆ ಹಾಕಿದ ನೀರು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಹಲವು ಅಧ್ಯಯನಗಳೇ ಹೇಳಿವೆ.
ಇದನ್ನು ಸೇವಿಸಿದ ತಕ್ಷಣ ನಮ್ಮ ದೇಹದಲ್ಲಿ ಇನ್ಸುಲಿನ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲದೆ, ಊಟ ಮಾಡಿದ ತಕ್ಷಣ ಮಧುಮೇಹ ಅಂಶ ಹೆಚ್ಚಳವಾಗುವುದನ್ನೂ ಇದು ತಡೆಯುತ್ತದೆ.
ಪ್ರತಿ ನಿತ್ಯ ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿಗೆ ಶುದ್ಧವಾದ ಚಕ್ಕೆಯ ತುಂಡುಗಳನ್ನು ಹಾಕಿ ನೆನೆಸಿಡಿ. ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.