ಬೆಂಗಳೂರು: ಮಹಿಳೆಯರು ಒಂದು ವಯಸ್ಸು ದಾಟಿದ ಮೇಲೆ ಲೈಂಗಿಕಾಸಕ್ತಿ ಕಳೆದುಕೊಳ್ಳುವುದು ಯಾಕೆ ಎಂಬ ವಿಚಾರವಾಗಿ ಅನೇಕ ಅಧ್ಯಯನಗಳೇ ನಡೆದಿವೆ. ಹೊಸದಾಗಿ ನಡೆಸಿರುವ ಸಮೀಕ್ಷೆಯೊಂದರಿಂದ ಅದಕ್ಕಿರುವ ಕಾರಣಗಳು ಬಹಿರಂಗವಾಗಿದೆ.
ಮಹಿಳೆಯರಲ್ಲಿ ಹಾರ್ಮೋನ್ ಏರುಪೇರು ಮಾತ್ರವಲ್ಲ, ಯೋನಿಯ ಡ್ರೈನೆಸ್, ಬೇಗನೇ ಮುಟ್ಟು ನಿಲ್ಲುವುದು ಇತ್ಯಾದಿ ಸಮಸ್ಯೆಗಳಿಂದ ಲೈಂಗಿಕಾಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಷ್ಟೇ ಅಲ್ಲ, ಕೆಲವರಲ್ಲಿ ಬೇಗನೇ ವಯಸ್ಸಾಗುವಿಕೆ, ವೈದ್ಯಕೀಯ ಔಷಧೋಪಚಾರಗಳ ಪರಿಣಾಮದಿಂದಲೂ ಈ ಸಮಸ್ಯೆ ಕಂಡುಬರುತ್ತದೆ ಎಂದು ವಿದೇಶೀ ಅಧ್ಯಯನಯವೊಂದು ಹೇಳಿದೆ.