ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುವ ಕರಿಮೆಣಸು ಒಂದು ಸಾಂಬಾರ ಪದಾರ್ಥವಾಗಿದ್ದು ಆಯುರ್ವೇದದಲ್ಲೂ ಇದನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಇದು ದೇಹಕ್ಕೆ ತುಂಬಾ ಪೂರಕವಾಗಿದ್ದು ಅದರ ಉಪಯೋಗಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಉಪಯೋಗಗಳು:
1. ಕರಿಮೆಣಸಿನಲ್ಲಿ ಜೀರ್ಣಕಾರಿ ಅಂಶವಿದ್ದು ಇದು ದೇಹದಲ್ಲಿನ ಜೀರ್ಣವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
2. ಇದು ದೇಹದಲ್ಲಿರುವ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ರಕ್ತ ಪರಿಚಲನೆಯನ್ನು ನಿಯಂತ್ರಿಸುವಲ್ಲಿ ಸಹಾಯಕಾರಿಯಾಗಿದೆ.
3. ಶೀತ ಮತ್ತು ಕೆಮ್ಮನ್ನು ಶಮನ ಮಾಡುವಲ್ಲಿ ಇದರ ಉಪಯೋಗ ಬಹಳ ಎಂದೇ ಹೇಳಬಹುದು. ಪ್ರಾಚೀನ ಚೀನೀ ಔಷಧಿಗಳಲ್ಲಿಯು ಸಹ ಇದನ್ನು ಬಳಸಿರುವ ಪೂರಾವೆಗಳು ಇವೆ. ಕೆಮ್ಮು ಮತ್ತು ಕಫಗಳಾದಂತ ಸಂದರ್ಭದಲ್ಲಿ ಇದನ್ನು ಜೇನಿನೊಂದಿಗೆ ಸೇವಿಸುವುದರಿಂದ ಶೀಘ್ರ ಪರಿಣಾಮವನ್ನು ಪಡೆಯಬಹುದು.
4. ಸೋಂಕುಗಳ ವಿರುದ್ಧ ಹೋರಾಡುತ್ತದೆ
ಕರಿಮೆಣಸುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿದ್ದು, ದಕ್ಷಿಣ ಆಫ್ರಿಕಾದ ಅಧ್ಯಯನವೊಂದರ ಪ್ರಕಾರ, ಸಾಂಕ್ರಾಮಿಕ ಸೋಂಕು ಮತ್ತು ಅದರ ಹರಡುವಿಕೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ.
5. ಧೂಮಪಾನವನ್ನು ತ್ಯಜಿಸಲು ಸಹಾಯ ಮಾಡುತ್ತದೆ
ಕರಿಮೆಣಸುಗಳ ಆವಿಯನ್ನು ಸೇವಿಸುವುದರಿಂದ ಧೂಮಪಾನದತ್ತ ಸೆಳೆಯುವ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.
6. ಕರಿಮೆಣಸು ಕ್ಯಾನ್ಸರ್ ನಿವಾರಕವಾಗಿದ್ದು ಇದರಲ್ಲಿರುವ ಪೈಪರಿನ್ ಅಂಶವು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.