ದಾಸವಾಳ ಸಾಮಾನ್ಯವಾಗಿ ಮನೆಯ ಮುಂದೆಯೋ ಇಲ್ಲ ದೇವಸ್ಥಾನದ ಬೀದಿಯಲ್ಲೋ ಕಂಡುಬರುವ ಹೂ ಇದನ್ನು ಪೂಜೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಹೂಗಳಿದ್ದು ಅದರಲ್ಲಿ ಬಿಳಿ ದಾಸವಾಳ ಹಾಗು ಕೆಂಪು ದಾಸವಾಳ ಹೆಚ್ಚಾಗಿ ಕಂಡುಬರುತ್ತದೆ.
ಭಾರತೀಯ ಆಯುರ್ವೇದದಲ್ಲಿ ದಾಸವಾಳವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಬಳಕೆ ಹಿಂದಿನಿಂದಲೂ ಇರುವುದಕ್ಕೆ ಹಲವಾರು ಪುರಾವೆಗಳಿವೆ.
ದಾಸವಾಳದ ಚಹಾ
ದಾಸವಾಳದ ಒಣಗಿದ ಮತ್ತು ಗಾಢವಾದ ಬಣ್ಣದ ಹೂಗಳ ದಳಗಳಿಂದ ಈ ನೈಸರ್ಗಿಕ ಚಹಾವನ್ನು ತಯಾರಿಸಲಾಗುತ್ತದೆ. ರುಚಿಯಲ್ಲಿ ಇದು ಸ್ವಲ್ಪ ಹುಳಿಯಾಗಿದ್ದು ಕ್ರ್ಯಾನ್ಬೆರಿಯನ್ನು ಹೋಲುವ ಸ್ವಾದವನ್ನು ಹೊಂದಿರುತ್ತದೆ. ಇದು ಸಂಪೂರ್ಣವಾಗಿ ಕೆಫೀನ್ ಮುಕ್ತವಾಗಿರುತ್ತದೆ.
ದಾಸವಾಳದ ಚಹಾ ಮಾಡುವ ವಿಧಾನ
ಬೇಕಾಗುವ ಸಾಮಗ್ರಿ
2 ಟೀ ಚಮಚಗಳು (10 ಮಿಲಿ) ಒಣಗಿದ ದಾಸವಾಳದ ಹೂವುಗಳು
ಜೇನು ತುಪ್ಪ ಅಥವಾ ಸಕ್ಕರೆ
ಪುದೀನ ಎಲೆಗಳು (ಐಚ್ಛಿಕ)
ನಿಂಬೆ ರಸ (ಐಚ್ಛಿಕ)
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಒಣಗಿದ ದಾಸವಾಳದ ಹೂವುಗಳನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಅದನ್ನು ಸೋಸಿ ಇನ್ನೊಂದು ಪಾತ್ರೆಯಲ್ಲಿ ಹಾಕಿಕೊಳ್ಳಿ ನಂತರ ನಿಮಗೆ ರುಚಿಗೆ ಬೇಕಾದಷ್ಟು ಜೇನು ಇಲ್ಲವೇ ಸಕ್ಕರೆ ಪುದೀನ ಎಲೆ (ಐಚ್ಛಿಕ), ನಿಂಬೆ ರಸ (ಐಚ್ಛಿಕ) ಹಾಕಿ ಮಿಶ್ರಣ ಮಾಡಿದರೆ ದಾಸವಾಳ ಚಹಾ ಸಿದ್ಧವಾಗುತ್ತದೆ.
ದಾಸವಾಳದ ಚಹಾದ ಸೇವನೆಯಿಂದಾಗುವ ಪ್ರಯೋಜನಗಳು
1. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
2. ಕೊಲೆಸ್ಟಾರ್ ಮಟ್ಟವನ್ನು ಕಡಿಮೆ ಮಾಡುತ್ತದೆ
3. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ
4. ನಿಮ್ಮ ಲಿವರ್ ಅನ್ನು ಆರೋಗ್ಯಕರವಾಗಿ ಇಡುತ್ತದೆ
5. ಮುಟ್ಟಿನ ಸಮಯದಲ್ಲಾಗುವ ಸೆಳೆತವನ್ನು ಕಡಿಮೆ ಮಾಡುತ್ತದೆ
6. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
7. ನಿಮ್ಮ ಮೈಬಣ್ಣವನ್ನು ಶುದ್ಧೀಕರಿಸುತ್ತದೆ
8. ಚರ್ಮದಲ್ಲಿನ ಎಣ್ಣೆಯ ಅಂಶವನ್ನು ನಿಯಂತ್ರಿಸುತ್ತದೆ.
ಈ ಚಹಾ ಇದು ಯಾರಿಗೆ ಸೂಕ್ತವಲ್ಲ
ಕಡಿಮೆ ರಕ್ತದೊತ್ತಡ
ಈ ಚಹಾವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ನಿಮಗೆ ರಕ್ತದೊತ್ತಡ ಸಮಸ್ಯೆ ಇಲ್ಲದಿದ್ದಲ್ಲಿ ಇದನ್ನು ಸೇವಿಸುವುದಕ್ಕಿಂತ ಸೇವಿಸದಿರುವುದೇ ಲೇಸು.
2. ಗರ್ಭಿಣಿ ಮಹಿಳೆಯರಿಗೆ
ಗರ್ಭಿಣಿ ಮಹಿಳೆಯರಿಗೆ ಮತ್ತು ಹಾರ್ಮೋನುಗಳ ಚಿಕಿತ್ಸೆಯಲ್ಲಿ ಒಳಗಾಗುವವರಿಗೆ ಅಥವಾ ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳುವವರಿಗೆ ಈ ದಾಸವಾಳದ ಚಹಾವು ಸೂಕ್ತವಲ್ಲ.
3 ಅಲರ್ಜಿ:
ಕೆಲವರಿಗೆ ಅಲರ್ಜಿ ತೊಂದರೆಗಳಿರುತ್ತವೆ ಅಂತಹವರಿಗೂ ಇದು ಸಹ ಇದು ಅಷ್ಟು ಸೂಕ್ತವಲ್ಲ
ಭ್ರಾಂತಿಯ ಲಕ್ಷಣ
ಕೆಲವು ಜನರ ಪ್ರಕಾರ ಈ ಚಹಾವನ್ನು ಸೇವಿಸಿದ ನಂತರ ಅವರಿಗೆ ಭ್ರಾಂತಿಯ ಲಕ್ಷಣಗಳು ಕಂಡುಬಂದಿರುವುದರಿಂದ ವಾಹನ ಚಲಾಯಿಸುವಾಗ ಇಲ್ಲವೇ ಯಂತೋಪಕರಣಗಳ ಕೆಲಸದಲ್ಲಿ ತೊಡಗಿರುವಾಗ ಇದನ್ನು ಸೇವಿಸದಿರುವುದೇ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.