ಬೆಂಗಳೂರು: ಸಾಯಂಕಾಲವಾದರೆ ಸಾಕು ಎಲ್ಲಿಲ್ಲದ ಸೊಳ್ಳೆಗಳು ಬಂದು ಮನೆಯ ಮೇಲೆ ದಾಳಿ ಮಾಡುತ್ತವೆ. ಈ ಸೊಳ್ಳೆಗಳ ಕಡಿತದಿಂದ ಡೆಂಗ್ಯು, ಮಲೇರಿಯಾ. ಚಿಕನಗುನ್ಯಾ ಹೀಗೆ ಅನೇಕ ಕಾಯಿಲೆಗಳು ಬರುತ್ತದೆ. ಸೊಳ್ಳೆಗಳ ನಿವಾರಣಿಗೆ ಮಸ್ಕಿಟೋ ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಅದರ ವಾಸನೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಯಾವುದೇ ಸೈಡ್ ಎಫೆಕ್ಟ ಇಲ್ಲದೆ ಸೊಳ್ಳೆಯ ಸಮಸ್ಯೆಯಿಂದ ಹೇಗೆ ದೂರವಾಗಬಹುದು ಎಂದು ನೋಡೋಣ.
ಹಳೆಯ ಮಸ್ಕಿಟೋ ರೀಫಿಲ್ ಕಂಟೇನರ್ ಮುಚ್ಚಳ ತೆಗೆದು ಅದಕ್ಕೆ 3-4 ಕರ್ಪೂರ ಹಾಕಿ ನಂತರ 30ಎಂಲ್ ಬೇವಿನ ಎಣ್ಣೆಯನ್ನು ಹಾಕಿ ಮುಚ್ಚಳ ಮುಚ್ಚಿ ಅದನ್ನು ಮಷೀನ್ ಗೆ ಫಿಕ್ಸ್ ಮಾಡಿ. ನಾರ್ಮಲ್ ಆಗಿ ಹೇಗೆ ಉಪಯೋಗಿಸುತ್ತಿರೊ ಹಾಗೆ ಇದನ್ನು ಉಪಯೋಗಿಸಬಹುದು. ಇದರಿಂದ ಸೊಳ್ಳೆಗಳು ಮನೆಯ ಒಳಗೆ ಬರುವುದನ್ನು ತಡೆಯಬಹುದು.
ಬೇವಿನ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನು ಸಮನಾಗಿ ಬೇರೆಸಿ ಮಕ್ಕಳು ಅಥವಾ ದೊಡ್ಡವರ ಕೈಕಾಲುಗಳಿಗೆ ಹಚ್ಚುವುದರಿಂದ ಸೊಳ್ಳೆಗಳು ನಮ್ಮ ಹತ್ತಿರ ಬರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ