ನಮ್ಮ ಚರ್ಮ ಯಾವುದಾದರೂ ಒಂದು ಭಾಗದಲ್ಲಿ ಗಂಟಿನ ರೂಪಕ್ಕೆ ತಿರುಗಿಕೊಳ್ಳುತ್ತದೆ. ಅದು ಬ್ಯಾಕ್ಟೀರಿಯಾಗಳ ಶೇಖರಣೆಯಿಂದ ಅಥವಾ ಅತಿಯಾದ ಎಣ್ಣೆಯ ಅಂಶದ ಉತ್ಪತ್ತಿಯಾಗಿ ಈ ರೀತಿ ಆಗಬಹುದು.ಸಾಮಾನ್ಯವಾಗಿ ಇಂತಹ ಗುಳ್ಳೆಗಳು ಅಥವಾ ಗಂಟುಗಳು ನೋವು ಕೊಡುವುದಿಲ್ಲ. ಲೇಸರ್ ಸರ್ಜರಿ ಅಥವಾ ಇನ್ನಿತರ ತ್ವಚೆಗೆ ಸಂಬಂಧಪಟ್ಟ ಚಿಕಿತ್ಸೆಗಳಿಂದ ಅವುಗಳನ್ನು ಪರಿಹಾರ ಮಾಡಬಹುದು.