Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಟ್ಟೆಗಳ ಮೇಲೆ ಕಲೆಯೇ ಈ ಸರಳ ಸೂತ್ರ ಪಾಲಿಸಿ.

ಬಟ್ಟೆಗಳ ಮೇಲೆ ಕಲೆಯೇ ಈ ಸರಳ ಸೂತ್ರ ಪಾಲಿಸಿ.

ಅತಿಥಾ

ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (14:20 IST)
ಕೆಲವೊಮ್ಮೆ ಕೆಲಸದ ಒತ್ತಡದಲ್ಲೋ ಅಥವಾ ಯಾವುದೋ ಗಡಿಬಿಡಿಯಲ್ಲಿ ನಮಗೆ ಗೊತ್ತಿಲ್ಲದಂತೆ ನಮ್ಮ ಬಟ್ಟೆಗಳಿಗೆ ಕಲೆಗಳಾಗಿ ಬಿಡುತ್ತದೆ. ಅದನ್ನು ಕೆಲವೊಮ್ಮೆ ಎಷ್ಟು ತೊಳೆದರೂ ಕಲೆಗಳ ಗುರುತು ಮಾತ್ರ ಹಾಗೆಯೇ ಇರುತ್ತದೆ. ಇಂತಹ ಕಠಿಣ ಕಲೆಗಳನ್ನು ಹೇಗೆ ನಿವಾರಿಸಬೇಕು ಎಂಬ ಚಿಂತೆ ನಿಮ್ಮಲ್ಲಿ ಇದ್ರೆ ಈ ಸೂತ್ರಗಳು ನಿಮಗೆ ಸಹಾಯಕಾರಿ ಆಗಬಹುದು.
ನಿಮ್ಮ ಬಟ್ಟೆಯಿಂದ ಗ್ರೀಸ್ ಕಲೆಯನ್ನು ತೆಗೆದುಹಾಕುವುದು ಹೇಗೆ--
 
ಉಡುಪನ್ನು ಬಿಡಿಸಿ ಮತ್ತು ಕಲೆಯಾದ ಜಾಗದಲ್ಲಿ ಪಾತ್ರೆ ತೊಳೆಯುವ ಡಿಟರ್ಜೆಂಟ್‌ ಅನ್ನು ಹಾಕಿ. ನಿಮ್ಮ ಬೆರಳಿನಿಂದ ಕಲೆಯ ಮೇಲೆ ಉಜ್ಜಿ. ಪಾತ್ರೆ ತೊಳೆಯುವ ಡಿಟರ್ಜೆಂಟ್‌ ಗ್ರೀಸ್ ಹೀರಿಕೊಳ್ಳುತ್ತಿದಂತೆ, ಗ್ರೀಸ್ ತಕ್ಷಣವೇ ಕರಗಲು ಪ್ರಾರಂಭವಾಗುತ್ತದೆ. ಕಲೆಯಾದ ಸ್ಥಳದಲ್ಲಿ ಸ್ವಲ್ಪ ವಿನೆಗರ್ ಹಾಕಿ ಇನ್ನೊಮ್ಮೆ ನಿಧಾನಕ್ಕೆ ಉಜ್ಜಿ. ಇಡೀ ಉಡುಪನ್ನು ನೀರಿನಲ್ಲಿ ನೆನೆಸಿ, ಮತ್ತು ಎಂದಿನಂತೆ ಸಾಮಾನ್ಯವಾಗಿ ತೊಳೆಯಿರಿ.
 
ನಿಮ್ಮ ಬಟ್ಟೆಯಿಂದ ಅರಿಶಿನದ ಕಲೆಗಳನ್ನು ತೆಗೆದುಹಾಕುವುದು ಹೇಗೆ?
 
1. ಹೈಡ್ರೋಜನ್ ಪೆರಾಕ್ಸೈಡ್ ಬಳಸಿ
ಒಂದು ಬಟ್ಟಲಲ್ಲಿ ½ ಕಪ್ ನೀರಿಗೆ 6% ಹೈಡ್ರೋಜನ್ ಪೆರಾಕ್ಸೈಡ್ ಹಾಕಿ, ಕಲೆಯಾದ ಭಾಗವನ್ನು ಈ ಮಿಶ್ರಣದಲ್ಲಿ ನೆನೆಸಿಡಿ. ಅರ್ಧ ಗಂಟೆಯ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.
 
2. ಅಡುಗೆ ಸೋಡಾ ಬಳಸಿ
ಕಲೆಯಾದ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆಯಿರಿ, ಕಲೆಯಾದ ಭಾಗಕ್ಕೆ ಅಡುಗೆ ಸೋಡಾ ಹಾಕಿ ಹಲ್ಲು ಉಜ್ಜುವ ಬ್ರಷ್‌ನಿಂದ ನಿಧಾನಕ್ಕೆ ಉಜ್ಜಿ, ಸ್ವಚ್ಛ ನೀರಿನಿಂದ ಮತ್ತೊಮ್ಮೆ ತೊಳೆಯಿರಿ.
 
ನಿಮ್ಮ ಬಟ್ಟೆಯಿಂದ ಗೋರಂಟಿ ಕಲೆಗಳನ್ನು ತೆಗೆದುಹಾಕುವುದು ಹೇಗೆ?
ಕಲೆಯಾದ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆದು, ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಹಲ್ಲು ಉಜ್ಜುವ ಬ್ರಷ್‌ನಿಂದ ನಿಧಾನಕ್ಕೆ ಉಜ್ಜಿ, ಸ್ವಚ್ಛ ನೀರಿನಿಂದ ಮತ್ತೊಮ್ಮೆ ತೊಳೆಯಿರಿ.
 
ನಿಮ್ಮ ಬಟ್ಟೆಯಿಂದ ಮಣ್ಣಿನ ಕಲೆಗಳನ್ನು ತೆಗೆದುಹಾಕುವುದು ಹೇಗೆ?
 
1. ನಿಂಬೆಹಣ್ಣಿನ ಹೋಳಿನಿಂದ ಮಣ್ಣಿನ ಕಲೆಯಾದ ಜಾಗದ ಮೇಲೆ ಉಜ್ಜಿರಿ.
 
2. ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ ಬಟ್ಟೆಯನ್ನು ನೆನೆಹಾಕಿ. 
 
ನಿಮ್ಮ ಬಟ್ಟೆಯಿಂದ ರಕ್ತದ ಕಲೆಗಳನ್ನು ತೆಗೆದುಹಾಕುವುದು ಹೇಗೆ?
 
ನೀರಿನಲ್ಲಿ ಉಪ್ಪು ಹಾಕಿ, ಕಲೆಯಾದ ಬಟ್ಟೆಯನ್ನು ನೆನೆಸಿಡಿ, 1 ಗಂಟೆಯ ನಂತರ ಹಗುರವಾಗಿ ಉಜ್ಜಿ ತೊಳೆಯಿರಿ.
 
ನಿಮ್ಮ ಬಟ್ಟೆಯಿಂದ ಇಂಕ್ ಕಲೆಯನ್ನು ತೆಗೆದುಹಾಕುವುದು ಹೇಗೆ?
 
1. ಟೂತ್‌ಪೇಸ್ಟ್
ಜೆಲ್ ಇಲ್ಲದಿರುವಂತಹ ಟೂತ್‌ಪೇಸ್ಟ್‌ ಅನ್ನು ಕಲೆಯ ಮೇಲೆ ಹಚ್ಚಿ ಅದನ್ನು ಒಣಗಲು ಬಿಡಿ ಮತ್ತು ನಿಮ್ಮ ಸಾಮಾನ್ಯ ಬಟ್ಟೆ ಒಗೆಯುವ ಸೋಪಿನಿಂದ ಬಟ್ಟೆ ತೊಳೆಯಿರಿ.
 
2. ನೇಲ್ ಪಾಲಿಶ್ ರಿಮೂವರ್
ಕಲೆಯಾದ ಜಾಗದಲ್ಲಿ ನೇಲ್ ಪಾಲಿಶ್ ರಿಮೂವರ್, ಡಿಟರ್ಜೆಂಟ್‌ ಹಾಕಿ ಉಜ್ಜುವ ಬ್ರಷ್‌ನಿಂದ ಹಗುರವಾಗಿ ಉಜ್ಜಿ ತೊಳೆಯಿರಿ.
 
ನಿಮ್ಮ ಬಟ್ಟೆಯಿಂದ ಎಣ್ಣೆಯ ಕಲೆಯನ್ನು ತೆಗೆದುಹಾಕುವುದು ಹೇಗೆ?
 
ಟಾಲ್ಕಂ ಪೌಡರ್, ಬೇಬಿ ಪೌಡರ್, ಅಥವಾ ಜೋಳದ ಹಿಟ್ಟನ್ನು ಕಲೆಯಾದ ಜಾಗದಲ್ಲಿ ಹರಡಿ, ಕೆಲವು ಗಂಟೆಗಳ ನಂತರ ಪೌಡರ್ ಉದುರಿಸಿ.
 
 
ನಿಮ್ಮ ಬಟ್ಟೆಯಿಂದ ಸಾಂಬಾರು ಕಲೆಗಳನ್ನು ತೆಗೆದುಹಾಕುವುದು ಹೇಗೆ?
 
1.ಗ್ಲಿಸರಿನ್
ಗ್ಲಿಸೆರೈನ್ ಅನ್ನು ನಿಮ್ಮ ಬೆರಳುಗಳಿಂದ ಕಲೆಯಾದ ಜಾಗದಲ್ಲಿ ಹಾಕಿ ಕೆಲವು ನಿಮಿಷಗಳ ಕಾಲ ಉಜ್ಜಿ, ತಂಪಾದ ನೀರಿನಿಂದ ತೊಳೆಯಿರಿ.
 
2.ನಿಂಬೆಹಣ್ಣು
ನಿಂಬೆಹಣ್ಣಿನ ರಸವನ್ನು ಕಲೆಯಾದ ಜಾಗದಲ್ಲಿ ಹಾಕಿ ಅರ್ಧ ಘಂಟೆಯವರೆಗೆ ಬಿಡಿ. ನಂತರ ಡಿಟರ್ಜೆಂಟ್‌ ಹಾಕಿ ತಂಪಾದ ನೀರಿನಿಂದ ತೊಳೆಯಿರಿ.
 
ಇದನ್ನು ಮಾಡುವ ಮೂಲಕ ನಿಮ್ಮ ಬಟ್ಟೆಯನ್ನು ಮೊದಲಿನಂತೆಯೇ ಕಲೆ ರಹಿತವನ್ನಾಗಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಳಿದಿರೋ ಅನ್ನದಿಂದ ಏನೆಲ್ಲಾ ಮಾಡ್ಬಹುದು ಗೊತ್ತಾ...!?