Publish Date: Thu, 11 Apr 2019 (14:06 IST)
Updated Date: Thu, 11 Apr 2019 (14:07 IST)
ರಂಗೇರಿರೋ ಮಂಡ್ಯ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಒಬ್ಬರ ಮೇಲೋಬ್ಬರು ವಾಗ್ಯುದ್ಧ ನಡೆಸಲಾರಂಭಿಸಿದ್ದಾರೆ.
ಮಂಡ್ಯದಲ್ಲಿ ಸಿಎಂ ಪ್ರಚಾರ ಮುಂದುವರಿದಿದೆ. ಮಗನ ಪರ ಪ್ರಚಾರ ನಡೆಸ್ತಿರೋ ಸಿಎಂ ಕುಮಾರಸ್ವಾಮಿಗೆ ಸಚಿವರು, ಸ್ಥಳೀಯರು ಮುಖಂಡರು ಸಾಥ್ ನೀಡಿದ್ದಾರೆ.
ಮದ್ದೂರು , ಮಳವಳ್ಳಿ ತಾಲ್ಲೂಕಿನಲ್ಲಿ ಸಿಎಂ ಪ್ರಚಾರ ನಡೆಸುತ್ತಿದ್ದಾರೆ.
ಇನ್ನು, ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರವೂ ಜೋರಾಗಿದೆ. ಕೆ ಆರ್ ನಗರ ಹಾಗೂ ಕೆ ಆರ್ ಪೇಟೆ ತಾಲ್ಲೂಕಿನಲ್ಲಿ ಪ್ರಚಾರ ನಡೆಸ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ನಿಖಿಲ್ ಪ್ರಚಾರವೂ ಬೊಂಬಾಟ್ ಆಗಿ ಮುಂದುವರಿದಿದೆ. ಮಂಡ್ಯದ ಬೂದನೂರು ಹಾಗೂ ಕೆರಗೋಡು ಜಿ.ಪಂ.ವ್ಯಾಪ್ತಿಯಲ್ಲಿ ಪ್ರಚಾರ ನಡೆಸ್ತಿದ್ದಾರೆ. ನಿಖಿಲ್ ಗೆ ಶಾಸಕ ಶ್ರೀನಿವಾಸ್ ರಿಂದ ಪ್ರಚಾರಕ್ಕೆ ಸಾಥ್ ಸಿಕ್ಕಿದೆ.