Publish Date: Thu, 11 Apr 2019 (09:16 IST)
Updated Date: Thu, 11 Apr 2019 (09:22 IST)
ಮಂಡ್ಯ : ವಿಕಲಚೇತನ ಹೆಣ್ಣು ಮಗಳು, ಜಿಲ್ಲಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿಯ ಸಾಧನೆ ಎಂದು ಸುಮಲತಾ ವಿರುದ್ಧ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಸಿಎಂ, ಸುಳ್ಳು ಆಪಾದನೆ ಹೊರಸಿ ಪಾಪ ವಿಕಲಚೇತನ ಮಹಿಳೆ ಜಿಲ್ಲಾಧಿಕಾರಿಯನ್ನು ಸುಮ್ಮನೆ ವರ್ಗಾವಣೆ ಮಾಡಿಸಿದರು ಮಂಡ್ಯ ಡಿಸಿ ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿಯ ಸಾಧನೆಯಾಗಿದೆ. ನನಗೆ ಯಾವ ಡಿಸಿ ಇದ್ದರೆ ಏನು? ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ ಹಾಕಿಸಿಕೊಳ್ಳಬೇಕಾ? ಅಧಿಕಾರಿ ಮತ ಹಾಕುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 1,127 ಕೋಟಿ ರೂ. ರೈತರು ಸಾಲ ಮಾಡಿದ್ದೀರಿ. ಇದರಲ್ಲಿ ಈಗಾಗಲೇ 400 ಕೋಟಿ ರೂ. ಹಣ ಕೊಟ್ಟಿದ್ದೇನೆ. ಆದರೆ ನನ್ನ ವಿರುದ್ಧ ರೈತರಿಗೆ ಮೋಸ ಮಾಡಿದ್ದೇನೆ ಎಂದು ಹೇಳುವವರ ಮಾತು ನಂಬುತ್ತೀರಾ ಎಂದು ಸಿಎಂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.