Publish Date: Wed, 10 Apr 2019 (19:52 IST)
Updated Date: Wed, 10 Apr 2019 (19:57 IST)
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದ ಮೇಲೆ ಬಿಜೆಪಿ ಮುಖಂಡರ ಕಣ್ಣು ಬಿದ್ದಿದೆ. ದೇವೇಗೌಡ್ರ ಮನೆಯೇ ಅದೃಷ್ಟ ತರುತ್ತದೆ. ಹೀಗಂತ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
ಹೆಚ್.ಡಿ. ದೇವೇಗೌಡರ ನಿವಾಸದ ಬಳಿ ಬಿಜೆಪಿ ಸಂಕಲ್ಪಯಾತ್ರೆಯು ಆರ್.ಅಶೋಕ್ ನೇತೃತ್ವದಲ್ಲಿ ನಡೆಯಿತು. ಬೆಂಗಳೂರಿನ ಪದ್ಮನಾಭನಗರದಲ್ಲಿ ಪಾದಯಾತ್ರೆ ನಡೆಸಿದ ಆರ್.ಅಶೋಕ್ ಮತ್ತು ಬಿಜೆಪಿ ಕಾರ್ಯಕರ್ತರು, ದೇವೇಗೌಡರ ನಿವಾಸ ಇರುವ 9ನೇ ಅಡ್ಡ ರಸ್ತೆಯನ್ನು ಬ್ಲಾಕ್ ಮಾಡಿದರು.
ಜೆಡಿಎಸ್ ಕೋಟೆಯಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪನೆ ಮಾಡುತ್ತೇನೆ ಎಂದು ಪದ್ಮನಾಭನಗರದಲ್ಲಿ ಆರ್.ಅಶೋಕ್ ಶಪಥ ಮಾಡಿದ್ರು. ಪದ್ಮನಾಭನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಅಶೋಕ್, ದೇವೇಗೌಡರ ನಿವಾಸ ಇರುವ ರಸ್ತೆ ನಮಗೆ ಅದೃಷ್ಟ ತರುತ್ತದೆ.
ಅದಕ್ಕೆ ಇಲ್ಲಿಂದಲೇ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭಿಸಿದ್ದೇವೆ. ಇಂದಿನಿಂದ ರಾಜ್ಯದ 22 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ವಿಜಯ ಸಂಕಲ್ಪಯಾತ್ರೆ ಮಾಡುತ್ತೇವೆ ಎಂದರು.