ಮಳೆ ಸುರಿದ್ದರೆ ಗ್ರಾಮಕ್ಕೆ ಸಂಚಾರಿಸುವ ರಸ್ತೆ ಒಂದು ರೀತಿಯಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟು, ರಸ್ತೆಯಲ್ಲಿ ಓಡಾಡುವುದು ಹರಸಹಾಸ ಪಡಬೇಕಾಗುತ್ತದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.
ಮನವಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಗ್ರಾಮಸ್ಥರು ತಮ್ಮ ಗ್ರಾಮದ ಜನರಿಂದ ಹಣವನ್ನ ಸಂಗ್ರಹಿಸಿಕೊಂಡು ರಸ್ತೆಯನ್ನ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಮರಳಿ ಗ್ರಾಮದ ರೈತರಾದ ಕರಿಯಪ್ಪಗೌಡ, ಹನುಮಂತ, ಶರಣಬಸವ, ಬಸವರಾಜ, ಮುತ್ತಣ್ಣ, ಬಸವರಾಜ, ಬಸನಗೌಡ ಮಾಲಿ ಪಾಟೀಲ್, ಸಿದ್ದಪ್ಪ ಅಮರೇಶ, ದೊಡ್ಡಬಸಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.