Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಯಚೂರು : ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ವಿಚಾರ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೆಚ್.ಡಿ.ಕುಮಾರಸ್ವಾಮಿ ನನಗೆ ಲೆಕ್ಕಕ್ಕೆ ಇಲ್ಲ. ಮಂದಿರ ದೇಣಿಗೆ ಬಗ್ಗೆ ಲೆಕ್ಕ ಕೇಳಲು ಇವರ್ಯಾರು? ಕೂಲಿ ಮಾಡುವ ಜನ 10ರೂ. ನೀಡಿದ್ದಾರೆ. ಮಂದಿರಕ್ಕೆ ದೇಣಿಗೆ ಕೊಟ್ಟವರು ಲೆಕ್ಕ ಕೇಳಲಿ. ಆದ್ರೆ ದೇಣಿಗೆ ಬಗ್ಗೆ ಲೆಕ್ಕ ಕೇಳಲು ಇವರ್ಯಾರು ? ಮಂದಿರ ನಿರ್ಮಾಣ ಸ್ಥಳ ವಿವಾದಿತ ಅಂತಾರೆ. ರಾಮನ ಬಗ್ಗೆ ಮಾತಾಡುವ ಯೋಗ್ಯತೆ ಇದೆಯಾ? ರಾಮನ ಬಗ್ಗೆ ಹಗುರವಾಗಿ ಮಾತಾಡೋದು ಬಿಡಲಿ ಎಂದು ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.