Daily Horoscope
✕

ಸರ್ಕಾರಿ ಉದ್ಯೋಗ ಪಡೆಯಲು ಸೂಕ್ತ ರೆಸ್ಯೂಮ್ ಸಿದ್ಧಪಡಿಸುವುದು ಹೇಗೆ? ಸರಳ ಮಾರ್ಗದರ್ಶಿ

ಕೃಷ್ಣವೇಣಿ ಕೆ
ಗುರುವಾರ, 27 ಆಗಸ್ಟ್ 2026 (14:11 IST)
ಸರ್ಕಾರಿ ವಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಲಕ್ಷಾಂತರ ಯುವಕರ ಕನಸು. ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ, ಸರಿಯಾದ ಮತ್ತು ಸ್ಪಷ್ಟವಾದ ರೆಸ್ಯೂಮ್ ಸಿದ್ಧಪಡಿಸುವುದು ಅತ್ಯಂತ ಮುಖ್ಯವಾದ ಮೊದಲ ಹೆಜ್ಜೆಯಾಗಿದೆ. ಖಾಸಗಿ ಕಂಪನಿಗಳ ರೆಸ್ಯೂಮ್‌ಗೆ ಹೋಲಿಸಿದರೆ ಸರ್ಕಾರಿ ಉದ್ಯೋಗದ ರೆಸ್ಯೂಮ್ ಫಾರ್ಮ್ಯಾಟ್ ಕೊಂಚ ಭಿನ್ನವಾಗಿದ್ದು, ಇಲ್ಲಿ ನಿಖರತೆ ಮತ್ತು ಅಧಿಕೃತತೆಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.
 

ನಿಮ್ಮ ಅರ್ಹತೆಗೆ ತಕ್ಕಂತೆ ಪರಿಣಾಮಕಾರಿ ರೆಸ್ಯೂಮ್ ಸಿದ್ಧಪಡಿಸಲು ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ:

1, ವೈಯಕ್ತಿಕ ವಿವರಗಳು:
ರೆಸ್ಯೂಮ್‌ನ ಮೇಲ್ಭಾಗದಲ್ಲಿ ನಿಮ್ಮ ಸಂಪೂರ್ಣ ಹೆಸರು, ಕಾಂಟ್ಯಾಕ್ಟ್ ಸಂಖ್ಯೆ, ಇಮೇಲ್ ಐಡಿ ಮತ್ತು ಪ್ರಸ್ತುತ ವಾಸವಿರುವ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ. ನಿಮ್ಮ ಹುಟ್ಟಿದ ದಿನಾಂಕ, ಲಿಂಗ ಮತ್ತು ರಾಷ್ಟ್ರೀಯತೆಯನ್ನು ನಮೂದಿಸುವುದು ಸರ್ಕಾರಿ ಅರ್ಜಿಗಳಲ್ಲಿ ಕಡ್ಡಾಯ.

2. ವೃತ್ತಿಪರ ಉದ್ದೇಶ :
ನೀವು ಅರ್ಜಿ ಸಲ್ಲಿಸುತ್ತಿರುವ ನಿರ್ದಿಷ್ಟ ಸರ್ಕಾರಿ ಹುದ್ದೆಗೆ ನಿಮ್ಮ ಅರ್ಹತೆ ಹೇಗೆ ಸೂಕ್ತವಾಗಿದೆ ಮತ್ತು ದೇಶ/ಸಂಸ್ಥೆಯ ಸೇವೆಗೆ ನಿಮ್ಮ ಕೊಡುಗೆ ಏನು ಎಂಬುದನ್ನು ೨-೩ ಸಾಲುಗಳಲ್ಲಿ ಸರಳವಾಗಿ ಬರೆಯಿರಿ.

3. ಶೈಕ್ಷಣಿಕ ಅರ್ಹತೆ :
ನಿಮ್ಮ ಶೈಕ್ಷಣಿಕ ಹಿನ್ನೆಲೆಯನ್ನು ಇತ್ತೀಚಿನ ವಿದ್ಯಾರ್ಹತೆಯಿಂದ ಪ್ರಾರಂಭಿಸಿ ಪಟ್ಟಿ ಮಾಡಿ.

ಉತ್ತೀರ್ಣರಾದ ವರ್ಷ

ಶಾಲಾ/ಕಾಲೇಜು ಅಥವಾ ವಿಶ್ವವಿದ್ಯಾಲಯದ ಹೆಸರು

ಪಡೆದ ಅಂಕಗಳು/ಶೇಕಡಾವಾರು ವಿವರಗಳನ್ನು ಕೋಷ್ಟಕದ ರೂಪದಲ್ಲಿ ನೀಡಿದರೆ ನೋಡಲು ಸುಲಭವಾಗುತ್ತದೆ.

4. ಅನುಭವದ ವಿವರ (Work Experience - ಇದ್ದಲ್ಲಿ ಮಾತ್ರ):
ಪೂರ್ವದಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕೆಲಸ ಮಾಡಿದ ಅನುಭವವಿದ್ದರೆ, ಸಂಸ್ಥೆಯ ಹೆಸರು, ನಿಮ್ಮ ಹುದ್ದೆ ಮತ್ತು ಕೆಲಸ ಮಾಡಿದ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಿ. ಕೆಲಸದ ಸ್ವರೂಪವನ್ನು ಮುಖ್ಯ ಬಿಂದುಗಳಾಗಿ ಬರೆಯಿರಿ.

5. ತಾಂತ್ರಿಕ ಮತ್ತು ಇತರ ಕೌಶಲ್ಯಗಳು:
ಸರ್ಕಾರಿ ಕೆಲಸಗಳಿಗೆ ಕಂಪ್ಯೂಟರ್ ಜ್ಞಾನ (MS Office, Tally, ಛಾಯಾಗ್ರಹಣ ಇತ್ಯಾದಿ) ಹಾಗೂ ಭಾಷಾ ಕೌಶಲ್ಯಗಳು (ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಓದಲು/ಬರೆಯಲು ಬರುವ ಜ್ಞಾನ) ಅತ್ಯಗತ್ಯ. ನಿಮ್ಮಲ್ಲಿರುವ ಪ್ರಮಾಣೀಕೃತ ಕೌಶಲ್ಯಗಳನ್ನು ಇಲ್ಲಿ ಉಲ್ಲೇಖಿಸಿ.

6. ಸಾಧನೆಗಳು ಮತ್ತು ಪ್ರಮಾಣಪತ್ರಗಳು :
ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡೆ ಅಥವಾ ಶೈಕ್ಷಣಿಕ ರಂಗದಲ್ಲಿ ಪಡೆದ ಪ್ರಶಸ್ತಿಗಳು ಮತ್ತು ರಾಜ್ಯ/ರಾಷ್ಟ್ರ ಮಟ್ಟದ ಪ್ರಮಾಣಪತ್ರಗಳಿದ್ದರೆ ಖಂಡಿತವಾಗಿಯೂ ನಮೂದಿಸಿ. ಇದು ನಿಮ್ಮ ಅರ್ಜಿ ಪ್ರೊಫೈಲ್ ಬಲಪಡಿಸಲು ನೆರವಾಗುತ್ತದೆ.

೭. ಸ್ವಯಂ ಘೋಷಣೆ:
ರೆಸ್ಯೂಮ್‌ನ ಕೊನೆಯಲ್ಲಿ "ಈ ಮೇಲ್ಕಂಡ ಎಲ್ಲಾ ವಿವರಗಳು ನನ್ನ ಜ್ಞಾನದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆ" ಎಂಬ ಸ್ವಯಂ ಘೋಷಣೆಯ ಸಾಲನ್ನು ಬರೆದು, ಕೆಳಗೆ ನಿಮ್ಮ ಸಹಿ, ದಿನಾಂಕ ಮತ್ತು ಸ್ಥಳವನ್ನು ನಮೂದಿಸಬೇಕು.

ನೆನಪಿನಲ್ಲಿಡಬೇಕಾದ ಮುಖ್ಯ ಸಂಗತಿಗಳು:

ರೆಸ್ಯೂಮ್ ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿರಲಿ (ಅತಿಯಾದ ಡಿಸೈನ್ ಅಥವಾ ಆಕರ್ಷಕ ಫಾಂಟ್‌ಗಳು ಬೇಡ).

ಯಾವುದೇ ಸುಳ್ಳು ಅಥವಾ ತಪ್ಪಾದ ಮಾಹಿತಿಗಳನ್ನು ನೀಡಬೇಡಿ; ದಾಖಲೆ ಪರಿಶೀಲನೆ ಸಮಯದಲ್ಲಿ ತೊಂದರೆಯಾಗಬಹುದು.

ನಿಮ್ಮ ಎಲ್ಲಾ ಅಂಕಪಟ್ಟಿಗಳು ಮತ್ತು ಸಾಕ್ಷ್ಯಪತ್ರಗಳೊಂದಿಗೆ ರೆಸ್ಯೂಮ್‌ನಲ್ಲಿರುವ ವಿವರಗಳು ಪಕ್ಕಾ ತಾಳೆಯಾಗುತ್ತಿರಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ