Publish Date: Sun, 09 Aug 2020 (10:09 IST)
Updated Date: Sun, 09 Aug 2020 (10:11 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ವಿವಾಹವಾಗುತ್ತಿರುವ ಕುರಿತು ಚಾಹಲ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ.
ತಮ್ಮ ಗೆಳತಿ ಧನಶ್ರೀ ವರ್ಮಾ ಜತೆಗೆ ಚಾಹಲ್ ಸಪ್ತಪದಿ ತುಳಿಯಲಿದ್ದಾರೆ. ನಿನ್ನೆ ಸಂಜೆ ತಮ್ಮಿಬ್ಬರ ಎಂಗೇಜ್ ಮೆಂಟ್ ಫೋಟೋವನ್ನು ಚಾಹಲ್ ಪ್ರಕಟಿಸಿದ್ದಾರೆ.
ಇನ್ನು, ಚಾಹಲ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕರು ಸಂದೇಶ ಬರೆದು ವಿಶ್ ಮಾಡಿದ್ದಾರೆ.