ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟಿಗರು ಮೈದಾನಕ್ಕಿಳಿಯದೇ ತಿಂಗಳುಗಳೇ ಕಳೆದಿವೆ. ಈ ನಡುವೆ ರೋಹಿತ್ ಶರ್ಮಾ ತಾವು ಮನೆಯಲ್ಲಿ ಖಾಲಿ ಕೈಯಲ್ಲಿ ಕೂತೇ ಮಾಡಿದ ದಾಖಲೆಯೊಂದನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಕ್ರಿಕೆಟ್ ಆಡಿದ್ದೇ ಕೊನೆ. ಅದಾದ ಬಳಿಕ ಕ್ರಿಕೆಟ್ ಬ್ಯಾಟ್ ಹಿಡಿದಿದ್ದೇ ಇಲ್ಲ. ಇಷ್ಟು ಸುದೀರ್ಘ ಸಮಯದವರೆಗೆ ಕ್ರಿಕೆಟ್ ಆಡದೇ ಕೂತಿದ್ದು ಇದೇ ಮೊದಲು. ಇದೊಂದು ದಾಖಲೆಯೇ ಸರಿ ಎಂದು ರೋಹಿತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದೀಗ ಐಪಿಎಲ್ ಗೆ ತಯಾರಾಗುತ್ತಿರುವ ರೋಹಿತ್ ಶರ್ಮಾ ನಿಧಾನವಾಗಿ ಔಟ್ ಡೋರ್ ನಲ್ಲಿ ಅಭ್ಯಾಸ ಆರಂಭಿಸುತ್ತಿದ್ದಾರೆ. ಆದರೆ ಕೊರೋನಾ ಭಯದಿಂದಾಗಿ ಅದನ್ನೂ ನಿಯಮಿತವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ಮತ್ತೆ ಹಿಟ್ ಮ್ಯಾನ್ ಘರ್ಜಿಸುವುದನ್ನು ನೋಡಲು ಕಾಯುತ್ತಿದ್ದಾರೆ.