ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ಗಳಿಂದಲೇ ಇತ್ತೀಚೆಗೆ ಗಮನ ಸೆಳೆಯುತ್ತಿದ್ದಾರೆ. ಆದರೆ ಇದೀಗ ಅವರು ಮಾಡಿದ ಟ್ವೀಟ್ ನಿಂದಾಗಿ ಕ್ಷಮೆ ಯಾಚಿಸಬೇಕಾದ ಪ್ರಸಂಗ ಎದುರಾಗಿದೆ.
ಕ್ರೀಡೆ ಮಾತ್ರವಲ್ಲದೆ, ದೇಶದ ಯಾವುದೇ ವಿಚಾರದ ಬಗ್ಗೆಯೂ ಸೆಹ್ವಾಗ್ ಟ್ವೀಟ್ ಮಾಡುತ್ತಾರೆ. ಅದೇ ರೀತಿ ಕೇರಳದಲ್ಲಿ ಹಸಿವು ತಡೆಯದೇ ತಿಂಡಿ ಕದ್ದು ತಿಂದ ತಪ್ಪಿಗೆ ಮಧು ಎಂಬಾತನನ್ನು ಹೊಡೆದು ಕೊಲೆ ಮಾಡಿದ ಪ್ರಕರಣದ ಬಗ್ಗೆ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿಕೊಂಡರು.
ಟ್ವೀಟ್ ನಲ್ಲಿ ಆರೋಪಿಗಳ ಹೆಸರು ಬರೆಯುವಾಗ ವೀರೂ ಕೇವಲ ಮುಸ್ಲಿಂ ವ್ಯಕ್ತಿಗಳ ಹೆಸರು ಬರೆದಿದ್ದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ಟ್ವೀಟ್ ಮಾಡಿ ಕ್ಷಮೆ ಕೇಳಿದ ವೀರೂ ತಮ್ಮ ಉದ್ದೇಶ ಕೋಮುವಾದವಲ್ಲ, ಹೀನಾಯ ಕೃತ್ಯವನ್ನು ಖಂಡಿಸುವುದಷ್ಟೇ ಎಂದು ಸಮರ್ಥನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ