Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಮುಖ ಆಟಗಾರರನ್ನೆಲ್ಲಾ ಮನೆಗೆ ಕಳುಹಿಸಿದ ಬಿಸಿಸಿಐ!

ಪ್ರಮುಖ ಆಟಗಾರರನ್ನೆಲ್ಲಾ ಮನೆಗೆ ಕಳುಹಿಸಿದ ಬಿಸಿಸಿಐ!
ಮುಂಬೈ , ಭಾನುವಾರ, 25 ಫೆಬ್ರವರಿ 2018 (13:03 IST)
ಮುಂಬೈ: ಭಾರತ-ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ತ್ರಿಕೋನ ಟಿ20 ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಪ್ರಮುಖ ಐವರು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
 

ಭಾರತ ತಂಡದ ನೇತೃತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ. ಶಿಖರ್ ಧವನ್ ಉಪನಾಯಕನಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಧೋನಿ,  ಜಸ್ಪ್ರೀತ್ ಬುಮ್ರಾ,  ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಗೆ ವಿಶ್ರಾಂತಿ ನೀಡಲಾಗಿದೆ.

ಕನ್ನಡಿಗ ಕೆಎಲ್ ರಾಹುಲ್, ಮನೀಶ್ ಪಾಂಡೆಗೆ ಅವಕಾಶ ಸಿಕ್ಕಿದೆ. ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಜತೆಗೆ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್, ಮೊಹಮ್ಮದ್ ಸಿರಾಜ್ ಮುಂತಾದ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಭಾರತ ತಂಡದ ಯುವ ಪಡೆ ತ್ರಿಕೋನ ಸರಣಿಗೆ ಕಣಕ್ಕಿಳಿಯಲಿದೆ. ಮಾರ್ಚ್ 6 ರಿಂದ ಸರಣಿ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶುಭ ಸುದ್ದಿ ಕೊಟ್ಟ ಟೀಂ ಇಂಡಿಯಾ ಪುರುಷ, ಮಹಿಳಾ ಕ್ರಿಕೆಟಿಗರು