Publish Date: Mon, 24 Aug 2020 (12:53 IST)
Updated Date: Mon, 24 Aug 2020 (12:55 IST)
ದುಬೈ: ಇತ್ತೀಚೆಗೆ ಕೊತ್ತಂಬರಿ ಸೊಪ್ಪು ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಟ್ರೋಲ್ ಆಗಿದೆ ಎಂದು ಎಲ್ಲರಿಗೂ ಗೊತ್ತು. ಈಗ ಯಾರೋ ಅಭಿಮಾನಿಗಳು ವಿರಾಟ್ ಕೊಹ್ಲಿ ಕೈಗೂ ಇದೇ ಕೊತ್ತಂಬರಿ ಸೊಪ್ಪು ಕೊಟ್ಟುಬಿಟ್ಟಿದ್ದಾರೆ!
ಐಪಿಎಲ್ ಆಡಲು ದುಬೈಗೆ ತೆರಳುವಾಗ ಕೊಹ್ಲಿ ವಿಜಯದ ಸಂಕೇತ ತೋರಿಸಿ ಫೋಟೋಗೆ ಪೋಸ್ ನೀಡಿದ್ದರು. ಕೊಹ್ಲಿಯ ಈ ಭಾವಚಿತ್ರವನ್ನೇ ಅಭಿಮಾನಿಗಳು ಎಡಿಟ್ ಮಾಡಿ ಕೈಯಲ್ಲಿ ಕೊತ್ತಂಬರಿ ಸೊಪ್ಪು ಹಿಡಿದಂತೆ ಚಿತ್ರಿಸಿ ಟ್ರೋಲ್ ಮಾಡಿದ್ದಾರೆ.