ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಾವು ಕ್ರಿಕೆಟ್ ಟೂರ್ ಸಂದರ್ಭದಲ್ಲಿ ಬಳಸುವ ಕಿಟ್ ಬಾಕ್ಸ್ ನ ಒಳಗೆ ಈ ಇಬ್ಬರು ಸ್ಪೂರ್ತಿದಾಯಕ ಮಹಿಳೆಯರ ಚಿತ್ರವಿಟ್ಟುಕೊಂಡಿರುತ್ತಾರೆ. ಅವರು ಯಾರು ಗೊತ್ತಾ?
ರೋಹಿತ್ ತಮ್ಮ ಬ್ಯಾಟ್, ಪ್ಯಾಡ್ ಮತ್ತಿತರ ಪರಿಕರ ಇಡುವ ಕಿಟ್ ಬ್ಯಾಗ್ ನೊಳಗೆ ತಮ್ಮ ಪತ್ನಿ ರಿತಿಕಾ ಮತ್ತು ಪುತ್ರಿ ಸಮೈರಾ ಫೋಟೋವನ್ನು ಅಂಟಿಸಿಕೊಳ್ಳುತ್ತಾರೆ. ಪ್ರತೀ ಬಾರಿಯೂ ಕಿಟ್ ತೆರೆಯುವಾಗ, ಪಂದ್ಯಕ್ಕೆ ಮೊದಲು ಇವರ ಫೋಟೋ ನೋಡಿ ಸ್ಪೂರ್ತಿ ಪಡೆಯುವ ಉದ್ದೇಶ ರೋಹಿತ್ ರದ್ದು.