Publish Date: Mon, 24 Aug 2020 (11:43 IST)
Updated Date: Mon, 24 Aug 2020 (11:44 IST)
ಮುಂಬೈ: ಭಾರತ ತಂಡವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ ನಾಯಕ ಧೋನಿ ವಿದಾಯ ಪಂದ್ಯವಾಡಬೇಕಿತ್ತು ಎಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಈಗ ಪಾಕ್ ಮಾಜಿ ಕ್ರಿಕೆಟಿಗರೂ ಧ್ವನಿಗೂಡಿಸಿದ್ದಾರೆ.
ಪಾಕ್ ಮಾಜಿ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಧೋನಿ ಕೊನೆಯ ಬಾರಿಗೊಮ್ಮೆ ಭಾರತೀಯ ಸಮವಸ್ತ್ರದಲ್ಲಿ ಆಡಿ ವಿದಾಯ ಹೇಳಬೇಕು ಎಂದು ಆಗ್ರಹಿಸಿದ್ದಾರೆ. ಧೋನಿಗೆ ವಿದಾಯ ಪಂದ್ಯ ಆಯೋಜಿಸದೇ ಇರುವುದು ಬಿಸಿಸಿಐ ಸೋಲು ಎಂದಿದ್ದಾರೆ.
ಇದಕ್ಕೂ ಮೊದಲು ಪಾಕ್ ಕ್ರಿಕೆಟಿಗರಾಗಿದ್ದ ಶೊಯೇಬ್ ಅಖ್ತರ್, ಕಮ್ರಾನ್ ಅಕ್ಮಲ್ ಕೂಡಾ ಧೋನಿ ವಿದಾಯ ಪಂದ್ಯವಾಡಬೇಕು ಎಂದು ಒತ್ತಾಯಿಸಿದ್ದರು.