ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ಹಾಡಲು ಸಾಲಾಗಿ ನಿಂತಿರುವಾಗ ಚ್ಯುಯಿಂಗ್ ಜಗಿದು ವಿರಾಟ್ ಕೊಹ್ಲಿ ವಿವಾದಕ್ಕೊಳಗಾಗಿದ್ದಾರೆ.
ರಾಷ್ಟ್ರಗೀತೆಗೆ ಹಾಡುವಾಗ ಬಾಯಲ್ಲಿ ಚ್ಯುಯಿಂಗ್ ಇಟ್ಟುಕೊಂಡಿದ್ದ ಕೊಹ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಕೊಹ್ಲಿ ಚ್ಯುಯಿಂಗ್ ಗಮ್ ಜಗಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಂದೊಮ್ಮೆ ಏಕದಿನ ಪಂದ್ಯವೊಂದಕ್ಕೆ ಮೊದಲು ಜಮ್ಮು ಕಾಶ್ಮೀರ ಮೂಲದ ಕ್ರಿಕೆಟಿಗ ಪರ್ವೇಜ್ ರಸೂಲ್ ಇದೇ ರೀತಿ ಚ್ಯುಯಿಂಗ್ ಗಮ್ ಜಗಿಯುತ್ತಾ ರಾಷ್ಟ್ರಗೀತೆ ಹಾಡಿದ್ದು ಭಾರೀ ವಿವಾದವಾಗಿತ್ತು. ಇದೀಗ ಕೊಹ್ಲಿ ಇಂತಹದ್ದೇ ಎಡವಟ್ಟು ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ