Publish Date: Fri, 17 Nov 2017 (09:44 IST)
Updated Date: Fri, 17 Nov 2017 (09:49 IST)
ಕಾನ್ಪುರ: ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಸತತ ಸೋಲಿನಿಂದ ಕಂಗೆಟ್ಟಿರುವ ಉತ್ತರ ಪ್ರದೇಶ ಗೆಲುವಿನ ಅನಿವಾರ್ಯತೆಯಲ್ಲಿದೆ. ಆದರೆ ಕರ್ನಾಟಕದ ಬ್ಯಾಟಿಂಗ್ ಬಲ ಬಲಾಢ್ಯವಾಗಿದ್ದು, ಎದುರಾಳಿಗೆ ಸೆಡ್ಡು ಹೊಡೆಯಲು ಸಮರ್ಥವಾಗಿದೆ.
ಕೆಎಲ್ ರಾಹುಲ್ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ಅವರ ಸ್ಥಾನಕ್ಕೆ ಈ ಪಂದ್ಯದಲ್ಲಿ ದೇಗಾ ನಿಶ್ಚಲ್ ಅವಕಾಶ ಪಡೆದಿದ್ದಾರೆ. ಮಯಾಂಕ್ ಅಗರ್ವಾಲ್ ಮತ್ತು ರವಿಕಾಂತ್ ಸಮರ್ಥ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸದ್ಯದ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 3 ರನ್ ಗಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ