ಕೋಲ್ಕೊತ್ತಾ: ಇತ್ತೀಚೆಗಿನ ದಿನಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಆಗಾಗ ಮುಖಾಮುಖಿಯಾಗುತ್ತಲೇ ಇರುತ್ತವೆ. ಇದರಿಂದ ಸ್ವತಃ ಕೊಹ್ಲಿ ಕೂಡಾ ಬೇಸತ್ತಿದ್ದಾರಂತೆ.
ಎರಡು ತಿಂಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್ ಆಡಿ ಬಂದಿದ್ದ ಟೀಂ ಇಂಡಿಯಾ ಮತ್ತೆ ಇಂದಿನಿಂದ ಟೆಸ್ಟ್ ಸರಣಿ ಆಡುತ್ತಿದೆ. ಅದೂ ಸಾಲದೆಂಬಂತೆ ಮುಂದಿನ ವರ್ಷ ಇನ್ನೊಮ್ಮೆ ಲಂಕಾ ಪ್ರಯಾಣ ಮಾಡಲಿದೆ.
ಈ ರೀತಿ ಪದೇ ಪದೇ ಲಂಕಾ ವಿರುದ್ಧವೇ ಆಡುತ್ತಿದ್ದರೆ ಅಭಿಮಾನಿಗಳು ಕ್ರಿಕೆಟ್ ಮೇಲೆ ಆಸಕ್ತಿ ಕಳೆದುಕೊಳ್ಳುವುದಿಲ್ಲವೇ? ಎಂದು ವರದಿಗಾರರೊಬ್ಬರು ಪ್ರಶ್ನಿಸಿದಾಗ ಹೌದೆನ್ನುವಂತೆ ಕೊಹ್ಲಿ ಉತ್ತರಿಸಿದ್ದಾರೆ.
‘ನಿಜಕ್ಕೂ ನೀವು ಹೇಳಿದ್ದು ಸರಿ. ನಮಗೆ ಅಭಿಮಾನಿಗಳೇ ದೊಡ್ಡ ಆಸ್ತಿ. ಅವರು ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ನನಗೂ ಹಾಗೇ ಅನಿಸುತ್ತಿದೆ. ಪದೇ ಪದೇ ಒಂದೇ ಎದುರಾಳಿ ಜತೆ ಆಡುವುದರಿಂದ ಆಟಗಾರರೂ ಬಳಲುತ್ತಾರೆ, ಆಸಕ್ತಿಯೂ ಹೊರಟು ಹೋಗುತ್ತದೆ. ಈ ವಿಷಯ ಮುಂದಿನ ದಿನಗಳಲ್ಲಿ ಖಂಡಿತಾ ಚರ್ಚೆಗೆ ಬರಲಿದೆ’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ