Publish Date: Fri, 11 Dec 2020 (10:48 IST)
Updated Date: Fri, 11 Dec 2020 (10:49 IST)
ಮುಂಬೈ: ವಿವಾಹ ವಾರ್ಷಿಕೋತ್ಸವವಿರಲಿ, ಅನುಷ್ಕಾ ಬರ್ತ್ ಡೇ ಇರಲಿ, ವಿರಾಟ್ ಕೊಹ್ಲಿ ಮಿಸ್ ಮಾಡೋ ಜನವೇ ಅಲ್ಲ. ಆದರೆ ಈ ಬಾರಿ ತಮ್ಮ ವಿವಾಹ ವಾರ್ಷಿಕೋತ್ಸವದಂದು ಇಬ್ಬರೂ ದೂರ ದೂರ ಇದ್ದಾರೆ. ಅನುಷ್ಕಾ ಇದೇ ಕಾರಣಕ್ಕೆ ಬೇಸರದಲ್ಲಿದ್ದಾರಂತೆ.
ಪತಿಗೆ ವಿವಾಹ ದಿನದ ಶುಭ ಕೋರಿರುವ ಅನುಷ್ಕಾ ಮೂರು ವರ್ಷ ಜತೆಯಲ್ಲಿ ನಾವು ಮತ್ತು ಸದ್ಯದಲ್ಲೇ ನಾವು ಮೂವರು. ಆದ್ರೆ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅನುಷ್ಕಾ ಖುಷಿಯ ಜತೆಗೆ ಬೇಸರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.