Publish Date: Fri, 11 Dec 2020 (09:40 IST)
Updated Date: Fri, 11 Dec 2020 (09:42 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸ್ಪೆಷಲ್ ಡೇಗೆ ಕೊಹ್ಲಿ ಪತ್ನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.
ಮದುವೆ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿರಾಟ್ ಕೊಹ್ಲಿ ಮೂರು ವರ್ಷಗಳು ಮತ್ತು ಜೀವನ ಪೂರ್ತಿ ಜತೆಯಾಗಿರುತ್ತೇವೆ ಎಂದು ಪ್ರೀತಿಯಿಂದ ಸಂದೇಶ ಬರೆದಿದ್ದಾರೆ. ಇನ್ನು, ವಿರುಷ್ಕಾ ದಂಪತಿ ಸದ್ಯದಲ್ಲೇ ಮೊದಲ ಮಗುವಿಗೆ ಪೋಷಕರಾಗಲಿದ್ದಾರೆ. ಅನುಷ್ಕಾಗೆ ಮುಂದಿನ ತಿಂಗಳು ಡೆಲಿವರಿಯಾಗಲಿದೆ. ಇದಕ್ಕಾಗಿ ಕೇವಲ ವಿರಾಟ್ ದಂಪತಿ ಮಾತ್ರವಲ್ಲ, ಅವರ ಕೋಟ್ಯಂತರ ಅಭಿಮಾನಿಗಳೂ ಎದಿರು ನೋಡುತ್ತಿದ್ದಾರೆ.