ಮುಂಬೈ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಬೆನ್ನಲ್ಲೇ ಆರ್ ಸಿಬಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಟೀಂ ಇಂಡಿಯಾ ಟಿ20 ಕ್ರಿಕೆಟ್ ಗೆ ಮುಂದಿನ ವಿಶ್ವಕಪ್ ಗೂ ಮೊದಲು ರೋಹಿತ್ ಶರ್ಮಾ ನಾಯಕರಾಗಬೇಕು ಎಂದು ಆಗ್ರಹಿಸುವ ಮೂಲಕ ಕೊಹ್ಲಿ ಟಿ20 ಮಾದರಿಗೆ ಸೂಕ್ತ ನಾಯಕರಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರೋಹಿತ್ ತಂಡ ಕಟ್ಟುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದಾರೆ. ಟೂರ್ನಮೆಂಟ್ ಗೆಲ್ಲುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ. ಈ ಮಾದರಿಗೆ ಅವರನ್ನೇ ನಾಯಕರಾಗಿಸಿದರೆ ಅದರಲ್ಲಿ ತಪ್ಪಿಲ್ಲ. ಇದರಿಂದ ಕೊಹ್ಲಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ ಎಂದಿದ್ದಾರೆ.