Publish Date: Sat, 11 Jun 2022 (08:30 IST)
Updated Date: Sat, 11 Jun 2022 (08:48 IST)
ಮುಂಬೈ: ಟೀಂ ಇಂಡಿಯಾದಿಂದ ಬಿಡುವು ಪಡೆದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಮೊನ್ನೆಯಷ್ಟೇ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನವೇರುವ ಮುನ್ನ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡಿ ಸುದ್ದಿಯಾಗಿದ್ದರು.
ಇದೀಗ ದಂಪತಿ ಮಾಲ್ಡೀವ್ಸ್ ನಲ್ಲಿ ಪ್ರವಾಸ ಮಾಡುತ್ತಿರುವುದು ಖಚಿತವಾಗಿದೆ. ಮಗಳು ವಮಿಕಾಗೆ ಸಂದೇಶವೊಂದನ್ನು ಬರೆದಿರುವ ಅನುಷ್ಕಾ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.