ಮುಂಬೈ: ವಿರಾಟ್ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ನೋಡಿ ವಿಶ್ವವೇ ಕೊಂಡಾಡುತ್ತಿದೆ. ಆದರೆ ಕೊಹ್ಲಿಯ ಮೇಲೆ ಟೀಂ ಇಂಡಿಯಾ ಅತಿಯಾಗಿ ಅವಲಂಬಿಸಿದೆಯಾ? ಹೀಗಂತ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಎಂತಹಾ ಆಟಗಾರನೆಂದರೆ ಈ ಯುಗದ ಸರ್ವಶ್ರೇಷ್ಠ ಆಟಗಾರರಾದ ದ್ರಾವಿಡ್, ಕುಂಬ್ಳೆ ಸಾಲಿಗೆ ಅವರೂ ಸೇರುತ್ತಾರೆ. ಆದರೆ ಅವರನ್ನೇ ಟೀಂ ಇಂಡಿಯಾ ಅತಿಯಾಗಿ ನೆಚ್ಚಿಕೊಂಡಿದೆ ಎಂದು ಶ್ರೀಕಾಂತ್ ಮಾಧ್ಯಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲೇ ಕೊಹ್ಲಿ 160 ರನ್ ಹೊರತುಪಡಿಸಿದರೆ ಟೀಂ ಇಂಡಿಯಾ ಬ್ಯಾಟಿಂಗ್ ಕಳೆಗುಂದಿತ್ತು. ಅವರೊಬ್ಬರನ್ನು ಹೊರತುಪಡಿಸಿದರೆ ಬ್ಯಾಟ್ಸ್ ಮನ್ ಗಳು ಒಗ್ಗಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಕೊಹ್ಲಿ ವಿಫಲವಾದರೆ ಟೀಂ ಇಂಡಿಯಾ ಬ್ಯಾಟಿಂಗ್ ಪೇಲವವಾಗುತ್ತದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ