ವಾಂಡರರ್ಸ್: ದ.ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲಬೇಕೆಂಬ ಟೀಂ ಇಂಡಿಯಾ ಕನಸು ನನಸಾಗಲಿಲ್ಲ. ಆದರೆ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಇನ್ನೊಂದು ಮೆಟ್ಟಿಲು ಸಾಕು.
ಇಂದು ಭಾರತ ಮತ್ತು ದ.ಆಫ್ರಿಕಾ ನಡುವೆ ವಾಂಡರರ್ಸ್ ಅಂಗಣದಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು, ಕಾಮನ ಬಿಲ್ಲಿನ ನಾಡಿನಲ್ಲಿ ಮೊದಲ ಏಕದಿನ ಸರಣಿ ಗೆಲ್ಲಲು ಭಾರತ ಸಜ್ಜಾಗಿದೆ.
ಟೀಂ ಇಂಡಿಯಾದ ಸದ್ಯದ ಫಾರ್ಮ್ ನೋಡಿದರೆ ಅದು ಕಷ್ಟವೇನಲ್ಲ. ಬೌಲರ್ ಗಳು ಅದರಲ್ಲೂ ಸ್ಪಿನ್ನರ್ ಗಳು ಆಫ್ರಿಕನ್ನರ ನಿದ್ದೆಗೆಡಿಸಿದ್ದಾರೆ. ಆದರೆ ಬ್ಯಾಟ್ಸ್ ಮನ್ ಗಳ ಬಗ್ಗೆ ನಾಯಕ ಕೊಹ್ಲಿ ಕೊಂಚ ಗಂಭೀರವಾಗಿ ಯೋಚಿಸಲೇಬೇಕು. ಆರಂಭಿಕ ರೋಹಿತ್ ಶರ್ಮಾ ಫಾರ್ಮ್ ಕಳೆದುಕೊಂಡಿದ್ದಾರೆ. ಅತ್ತ ಮಧ್ಯಮ ಕ್ರಮಾಂಕದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಕೊಹ್ಲಿ ಎಂಬ ಆಲದ ಮರ ಇವೆಲ್ಲಾ ಕಪ್ಪು ಮಸಿ ನುಂಗಿ ಹಾಕಿದೆ.
ಹಾಗಿದ್ದರೂ ಪ್ರತೀ ಬಾರಿಯೂ ಕೊಹ್ಲಿಯ ಮೇಲೆಯೇ ನಿರೀಕ್ಷೆಯ ಭಾರ ಹಾಕಲು ಸಾಧ್ಯವಿಲ್ಲ. ಅತ್ತ ದ.ಆಫ್ರಿಕಾಗೂ ಎಬಿಡಿ ವಿಲಿಯರ್ಸ್ ಆಗಮನದ ಸಂತಸ. ಸಿಡಿಲ ಮರಿಯ ಆಗಮನದಿಂದಾದರೂ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆ ಅತಿಥೇಯ ತಂಡದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ