ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸುಮಾರು 100 ರನ್ ಗಳನ್ನು ಓಡಿಯೇ ವಿಶ್ವ ದಾಖಲೆ ಮಾಡಿದ್ದ ವಿರಾಟ್ ಕೊಹ್ಲಿಗೆ ಈ ಒಂದು ವಿಚಾರದಲ್ಲಿ ಡೌಟ್ ಕ್ಲಿಯರ್ ಮಾಡಬೇಕಿತ್ತಂತೆ!
ಅದಕ್ಕಾಗಿಯೇ ಅವರು ಸುದೀರ್ಘ ಇನಿಂಗ್ಸ್ ಆಡಿದರಂತೆ. ಅಷ್ಟೇ ಅಲ್ಲದೆ, ಯಾವತ್ತಿನ ಹಾಗೆ ಸಿಕ್ಸರ್, ಬೌಂಡರಿ ಸಿಡಿಸದೇ ಓಡುತ್ತಲೇ ರನ್ ಗಳಿಸಿದರಂತೆ! ಅದೇನದು ಅಂತೀರಾ?
ಕೊಹ್ಲಿಗೆ ಶುರುವಿನಿಂದ ಕೊನೆಯವರೆಗೂ ಅಂದರೆ ಪೂರ್ತಿ 50 ಓವರ್ ಬ್ಯಾಟಿಂಗ್ ನಡೆಸಲು ಸಾಧ್ಯವಾಗುತ್ತಾ ಎಂದು ಟೆಸ್ಟ್ ಮಾಡಬೇಕಿತ್ತಂತೆ. ಅದರಿಂದ ಅವರ ಫಿಟ್ ನೆಸ್ ಲೆವೆಲ್ ಕೂಡಾ ಪರೀಕ್ಷೆಗೊಳಪಡಿಸಿದಂತಾಯಿತು ಎಂಬುದು ಅವರ ಲೆಕ್ಕಾಚಾರವಾಗಿತ್ತಂತೆ. ಅದೇ ರೀತಿ ಆಯಿತು. ಕೊಹ್ಲಿ ತಮ್ಮ 160 ರನ್ ಗಳ ಇನಿಂಗ್ಸ್ ನಲ್ಲಿ 2 ಕಿ.ಮೀ. ನಷ್ಟು ಓದಿ ದಾಖಲೆ ಮಾಡಿದರು. ಈಗ ಸಮಾಧಾನವಾಗಿದೆಯಂತೆ ರನ್ ಮೆಷಿನ್ ಗೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ