Publish Date: Sat, 23 Sep 2017 (07:58 IST)
Updated Date: Sat, 23 Sep 2017 (08:00 IST)
ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ಭರ್ಜರಿಯಾಗಿ ದ್ವಿತೀಯ ಏಕದಿನ ಪಂದ್ಯ ಗೆದ್ದ ಟೀಂ ಇಂಡಿಯಾ ಕನ್ನಡಿಗ ಮನೀಶ್ ಪಾಂಡೆ ಶರ್ಟ್ ಬಿಚ್ಚಿಸಿ ಭರ್ಜರಿಯಾಗಿ ಸೆಲೆಬ್ರೇಷನ್ ಮಾಡಿತು.
ಅಸಲಿಗೆ ಮನೀಶ್ ಗೆ ಈ ಅವತಾರ ಮಾಡಿದ್ದು ಅವರ ಜನ್ಮ ದಿನ ಆಚರಿಸಲು. ಟೀಂ ಇಂಡಿಯಾ ಆಟಗಾರರು ಕೋಲ್ಕೊತ್ತಾದ ಹೋಟೆಲ್ ನಲ್ಲಿ ಮನೀಶ್ ರನ್ನು ಶರ್ಟ್ ಲೆಸ್ ಆಗಿ ನಿಲ್ಲಿಸಿ ಕೇಕ್ ಹಚ್ಚಿ ಸಂಭ್ರಮಿಸಿದೆ.
ಶರ್ಟ್ ತೆಗೆದಿದ್ದ ಮನೀಶ್ ರನ್ನು ತಪ್ಪಿಸಿಕೊಳ್ಳದಂತೆ ಧೋನಿ ಹಿಂದಿನಿಂದ ಹಿಡಿದಿದ್ದರೆ, ಕೇದಾರ್ ಜಾದವ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಮುಖಕ್ಕೆ ಕೇಕ್ ಬಳಿದು ಮನೀಶ್ ಬರ್ತ್ ಡೇ ಜತೆ ಪಂದ್ಯದ ಗೆಲುವನ್ನೂ ವಿಶಿಷ್ಟವಾಗಿ ಆಚರಿಸಿಕೊಂಡರು. ಸೆಪ್ಟೆಂಬರ್ 10 ರಂದು ಮನೀಶ್ ಬರ್ತ್ ಡೇ ಇತ್ತು.