ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸ್ಪಿನ್ನರ್ ಕುಲದೀಪ್ ಯಾದವ್ ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪಿನ್ನರ್ ಎನಿಸಿದರು. ಆದರೆ ಈ ಸಾಧನೆಗೆ ಮೊದಲು ಧೋನಿ ಹೇಳಿದ್ದ ಮಾತೊಂದನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಯುವ ಬೌಲರ್ ಗಳಿಗೆ ವಿಕೆಟ್ ಹಿಂದುಗಡೆ ನಿಲ್ಲುವ ಧೋನಿಯೇ ಸಲಹೆಗಾರ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಎಲ್ಲಾ ಬೌಲರ್ ಗಳಿಗೂ ಧೋನಿ ವಿಕೆಟ್ ಹಿಂದೆ ಬ್ಯಾಟ್ಸ್ ಮನ್ ಹೇಗೆ ಹೆಜ್ಜೆ ಹಾಕುತ್ತಾನೆಂದು ಸೂಕ್ಷ್ಮವಾಗಿ ಗಮನಿಸಿ ಸೂಚನೆ ಕೊಡುತ್ತಿರುತ್ತಾರೆ. ಕುಲದೀಪ್ ಗೂ ಹಾಗೇ ಆಗಿತ್ತಂತೆ.
ಆರಂಭದಲ್ಲಿ ಕೊಂಚ ತಡಬಡಾಯಿಸುತ್ತಿದ್ದ ಕುಲದೀಪ್, ಆಸೀಸ್ ಬ್ಯಾಟ್ಸ್ ಮನ್ ಗಳಿಂದ ಚಚ್ಚಿಸಿಕೊಂಡು ದಿಕ್ಕೇ ತೋಚದಂತಾಗಿದ್ದರಂತೆ. ಆಗ ನೇರವಾಗಿ ಧೋನಿ ಬಳಿಗೆ ಹೋದ ಕುಲದೀಪ್ ‘ಬಾಯಿ.. ನಾನು ಹೇಗೆ ಬಾಲ್ ಮಾಡಲಿ?’ ಎಂದು ಸಲಹೆ ಕೇಳಿದರಂತೆ. ಇದಕ್ಕೆ ಧೋನಿ ‘ನಿನಗೆ ಹೇಗೆ ಅನಿಸುತ್ತದೋ ಹಾಗೇ ಬಾಲ್ ಮಾಡು’ ಎಂದು ಸ್ವಾತಂತ್ರ್ಯ ಕೊಟ್ಟರಂತೆ. ಸ್ಪೂರ್ತಿಗೊಂಡ ಕುಲದೀಪ್ ಇದನ್ನೇ ಸವಾಲಾಗಿ ತೆಗೆದುಕೊಂಡು ಅದ್ಭುತ ಬೌಲಿಂಗ್ ನಡೆಸಿದರು. ಇದನ್ನು ಪಂದ್ಯಾ ನಂತರ ಅವರೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ