Publish Date: Wed, 02 Sep 2020 (13:04 IST)
Updated Date: Wed, 02 Sep 2020 (13:06 IST)
ದುಬೈ: ಸುರೇಶ್ ರೈನಾ ಐಪಿಎಲ್ ಕೂಟದಿಂದ ಹೊರಬಿದ್ದ ಬಳಿಕ ಅವರ ಬಗ್ಗೆ ಮಾಲಿಕ ಎನ್ ಶ್ರೀನಿವಾಸನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದರೊಂದಿಗೆ ರೈನಾ ಮತ್ತು ಸಿಎಸ್ ಕೆ ತಂಡದ ನಡುವೆ ಕಿತ್ತಾಟ ನಡೆದಿತ್ತು ಎಂಬ ಊಹಾಪೋಹಗಳು ಹಬ್ಬಿತ್ತು.
ರೈನಾ ವಿಚಾರದಲ್ಲಾದ ಡ್ಯಾಮೇಜ್ ಕಂಟ್ರೋಲ್ ಗೆ ಈಗ ಸಿಎಸ್ ಕೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂದೇಶ ನೀಡಿದೆ. ರೈನಾ ಕುಟುಂಬದಲ್ಲಿ ಕೊಲೆ, ದಾಳಿಯಾದ ಪ್ರಕರಣವನ್ನು ಉಲ್ಲೇಖಿಸಿ ‘ಈ ಕಷ್ಟದ ಸಂದರ್ಭದಲ್ಲಿ ನಾವು ನಿಮ್ಮ ಜತೆಗಿರುತ್ತೇವೆ. ನಿಮ್ಮನ್ನು ನಾವು ಎಂದಿಗೂ ಪ್ರೀತಿಸುವೆವು’ ಎಂದು ಟ್ವೀಟ್ ಮಾಡಿ ರೈನಾ ಜತೆಗೆ ಯಾವುದೇ ಕಿತ್ತಾಟ ನಡೆದಿಲ್ಲ ಎಂದು ಸಾರಲು ಹೊರಟಿದೆ. ಆದರೂ ರೈನಾ ಐಪಿಎಲ್ ನಿಂದ ಹೊರ ಬರಲು ನಿಜವಾದ ಕಾರಣವೇನೆಂಬುದರ ಬಗ್ಗೆ ಏನನ್ನೂ ಹೇಳಿಲ್ಲ.