ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೊರೋನಾ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಆ ತಂಡದ ಆಟಗಾರರ ಕ್ವಾರಂಟೈನ್ ಅವಧಿ ಮುಂದುವರಿದಿದೆ. ಹೀಗಾಗಿ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸಿಎಸ್ ಕೆ ಜತೆ ಆಡಲು ಸಾಧ್ಯವಾಗದು.
ಹಾಗಿದ್ದರೆ ಸಿಎಸ್ ಕೆ ಬದಲಾಗಿ ಮುಂಬೈ ಎದುರು ಆರಂಭಿಕ ಪಂದ್ಯವಾಡುವ ತಂಡ ಯಾವುದು ಎಂಬ ಪ್ರಶ್ನೆ ಈಗ ಎದುರಾಗಿದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ವಿರುದ್ಧ ಮೊದಲ ಪಂದ್ಯವಾಡಬಹುದು ಎನ್ನಲಾಗಿದೆ. ಆದರೆ ಬಿಸಿಸಿಐ ಇನ್ನೂ ವೇಳಾಪಟ್ಟಿ ಪಕ್ಕಾ ಮಾಡಿಲ್ಲ. ಆದರೆ ಇಂತಹದ್ದೊಂದು ಸಾಧ್ಯತೆ ಇಲ್ಲದಿಲ್ಲ ಎನ್ನಲಾಗಿದೆ.